ನಿತಿನ್‌ ಗಡ್ಕರಿ ಮಾತ್ರ ಕೆಲಸ ಮಾಡುವ ಸಚಿವ! ಸುಪ್ರಿಯಾ ಸುಳೆ

ನಿತಿನ್‌ ಗಡ್ಕರಿ ಮಾತ್ರ ಕೆಲಸ ಮಾಡುವ ಸಚಿವ! ಸುಪ್ರಿಯಾ ಸುಳೆ

ಮುಂಬೈ: ನರೇಂದ್ರ ಮೋದಿ ಸರ್ಕಾರದಲ್ಲಿ ಕೆಲಸ ಮಾಡುವ ಸಚಿವರೆಂದರೆ ನಿತಿನ್‌ ಗಡ್ಕರಿ ಮಾತ್ರ. ಹೀಗೆಂಬ ಹೊಗಳಿಕೆಯ ಮಾತುಗಳನ್ನು ಹೇಳಿದ್ದು ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ.

ಮಹಾರಾಷ್ಟ್ರದ ಪರ್ಬನಿಯಲ್ಲಿ ಆಯೋಜಿಸಲಾಗಿದ್ದ ಪಕ್ಷದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಕೆಲಸಗಳನ್ನು ಮಾಡಿಸಿಕೊಡುವ ಸಂದರ್ಭದಲ್ಲಿ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಪಕ್ಷ ಬೇಧ ಮಾಡುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪರ್ಬನಿ ಜಿಲ್ಲೆಯ ವ್ಯಾಪ್ತಿಯಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿಯ ಭಾಗವನ್ನು ದುರಸ್ತಿ ಮಾಡಿಕೊಡುವಂತೆ ಟ್ವೀಟ್‌ ಮಾಡಿ ಮನವಿಯನ್ನೂ ಮಾಡಿಕೊಂಡಿದ್ದಾರೆ. ಜತೆಗೆ ಆ ಟ್ವೀಟ್‌ ಅನ್ನು ಗಡ್ಕರಿ ಅವರಿಗೆ ಟ್ಯಾಗ್‌ ಮಾಡಿದ್ದಾರೆ.