ನಾಳೆ ಇಡೀ ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪರಿಷತ್ ಕಲಾಪದಲ್ಲಿ ಅವಕಾಶ - ಸಭಾಪತಿ ಬಸವರಾಜ ಹೊರಟ್ಟಿ

ನಾಳೆ ಇಡೀ ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪರಿಷತ್ ಕಲಾಪದಲ್ಲಿ ಅವಕಾಶ - ಸಭಾಪತಿ ಬಸವರಾಜ ಹೊರಟ್ಟಿ

ಬೆಳಗಾವಿ: ನಾಳೆ ಇಡೀ ದಿನ ಪ್ರಶ್ನೋತ್ತರ ಕಲಾಪದ ಬಳಿಕ, ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ನೀಡೋದಾಗಿ ಸಭಾಪತಿ ಬಸವರಾಜ ಹೊರಟ್ಟಿಯವರು ಅವಕಾಶ ನೀಡಿದ್ದಾರೆ.

ಇಂದು ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತ ಮಾತನಾಡಿದಂತ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸೋದಕ್ಕೆ ಅವಕಾಶ ನೀಡುವಂತೆ ಕೋರಿದರು.

ಅಲ್ಲದೇ ಉತ್ತರ ಕರ್ನಾಟಕ ಭಾಗದ ವಿಷಯದ ಬಗ್ಗೆ ಚರ್ಚಿಸಲು ರೂಲಿಂಗ್ ನೀಡುವಂತೆ ಕೋರಿದರು.

ಸದನದ ಸದಸ್ಯರ ಒತ್ತಡಕ್ಕೆ ಮಣಿದಂತ ಸಭಾಪತಿ ಬಸವರಾಜ ಹೊರಟ್ಟಿಯವರು ನಾಳೆ ಪ್ರಶ್ನೋತ್ತರ ಕಲಾಪದ ಬಳಿಕ, ಇಡೀ ದಿನ ಉತ್ತರ ಕರ್ನಾಟಕ ಭಾಗದ ವಿಷಯದ ಚರ್ಚೆಗೆ ಅವಕಾಶ ನೀಡುವುದಾಗಿ ರೂಲಿಂಗ್ ನೀಡೋದಾಗಿ ತಿಳಿಸಿದರು.