'ನಾಗರಿಕರು ಯಾವಾಗಲೂ ಸರಿ' ಎಂಬುದು ಆಡಳಿತದ ಧ್ಯೇಯವಾಕ್ಯವಾಗಿರಬೇಕು: ಪ್ರಧಾನಿ ಮೋದಿ

ನವದೆಹಲಿ: 'ನಾಗರಿಕ ಯಾವಾಗಲೂ ಸರಿ' ಎಂಬುದು ಆಡಳಿತದ ಧ್ಯೇಯವಾಕ್ಯವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ʻರೋಜ್‌ಗಾರ್ ಮೇಳ'ದಲ್ಲಿ ಮಾತನಾಡಿದ ಮೋದಿ, 'ವ್ಯಾಪಾರ ಜಗತ್ತಿನಲ್ಲಿ, 'ಗ್ರಾಹಕ ಯಾವಾಗಲೂ ಸರಿ' ಎಂದು ಹೇಳಲಾಗುತ್ತದೆ.
'ನಾವು ನಿರಂತರವಾಗಿ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಬದ್ಧರಾಗಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ, ಅವಕಾಶಗಳು ಹೆಚ್ಚಾಗುತ್ತಲೇ ಇರುತ್ತವೆ. ತ್ವರಿತ ಅಭಿವೃದ್ಧಿಯಾದಾಗ, ಸ್ವಯಂ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಇಂದು ಸ್ವಯಂ ಉದ್ಯೋಗ ಕ್ಷೇತ್ರವು ಪ್ರಗತಿಯಲ್ಲಿದೆ' ಎಂದು ಹೇಳಿದರು.
ಇದೇ ಸಂದರ್ಭದಲ್ಲಿ, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡವರಿಗೆ ಸುಮಾರು 71,000 ನೇಮಕಾತಿ ಪತ್ರಗಳನ್ನು ವಿತರಿಸಿದರು.