ದೆಹಲಿ ಅತ್ಯಂತ ಅಶಿಸ್ತಿನ ನಗರʼ ಎಂದು ಬೇಸರ ವ್ಯಕ್ತಪಡಿಸಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ. ಯಾಕೆ ಗೊತ್ತಾ?

ದೆಹಲಿ ಅತ್ಯಂತ ಅಶಿಸ್ತಿನ ನಗರʼ ಎಂದು ಬೇಸರ ವ್ಯಕ್ತಪಡಿಸಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ. ಯಾಕೆ ಗೊತ್ತಾ?

ವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಸಂಚಾರ ನಿಯಮ ಉಲ್ಲಂಘನೆಯ ಉದಾಹರಣೆಯನ್ನು ಉಲ್ಲೇಖಿಸಿರುವ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ(Narayana Murthy) ಅವರು ಮಂಗಳವಾರ ದೆಹಲಿಗೆ ಬರಲು ಅನಾನುಕೂಲವಾಗಿದೆ. ಏಕೆಂದರೆ, ಇದು ಅಶಿಸ್ತು ಅತಿ ಹೆಚ್ಚು ಇರುವ ನಗರವಾಗಿದೆ ಎಂದು ಹೇಳಿದ್ದಾರೆ.

ಅಖಿಲ ಭಾರತ ನಿರ್ವಹಣಾ ಸಂಘ (ಎಐಎಂಎ) ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಮೂರ್ತಿ, ದೆಹಲಿಗೆ ಬರಲು ನನಗೆ ತುಂಬಾ ಅನಾನುಕೂಲವಾಗಿದೆ. ಏಕೆಂದರೆ, ಇದು ಅಶಿಸ್ತು ಅತಿ ಹೆಚ್ಚು ಇರುವ ನಗರವಾಗಿದೆ. ಇದಕ್ಕೆ ನಾನು ಒಂದು ಉದಾಹರಣೆ ಕೊಡುತ್ತೇನೆ. ʻನಾನು ನಿನ್ನೆ ವಿಮಾನ ನಿಲ್ದಾಣದಿಂದ ಬರುವಾಗ ರಸ್ತೆಯಲ್ಲಿ ರೆಡ್‌ ಸಿಗ್ನಲ್‌ ಇದ್ದರೂ ಹಲವಾರು ಕಾರುಗಳು, ಮೋಟರ್‌ಬೈಕ್‌ಗಳು ಮತ್ತು ಸ್ಕೂಟರ್‌ಗಳು ಕಾಳಜಿಯಿಲ್ಲದೇ ರೆಡ್‌ ಸಿಗ್ನಲ್‌ ಕ್ರಾಸ್‌ ಮಾಡಿ ಮುಂದೆ ಸಾಗಿದವು. ಇದು ಸಂಚಾರ ನಿಯಮ ಉಲ್ಲಂಘಿಸಿದಂತೆ ಎಂದಿದ್ದಾರೆ.