ದೆಹಲಿಯ ಇಂಡಿಯಾ ಗೇಟ್ ನಲ್ಲಿ ಕಾಂತಾರ ತಂಡದ ಭರ್ಜರಿ ಪ್ರೊಮೋಷನ್....!

ದೆಹಲಿಯ ಇಂಡಿಯಾ ಗೇಟ್ ನಲ್ಲಿ ಕಾಂತಾರ ತಂಡದ ಭರ್ಜರಿ ಪ್ರೊಮೋಷನ್....!

ವದೆಹಲಿ: ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಬಿಡುಗಡೆಯಾದಾಗಿನಿಂದ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಚಿತ್ರವು ವ್ಯಾಪಕವಾದ ಮೆಚ್ಚುಗೆಯನ್ನು ಪಡೆದಿದೆ, ಪ್ರಭಾಸ್‌ನಿಂದ ಹಿಡಿದು ಕಂಗನಾವರೆಗಿನ ಸೆಲೆಬ್ರಿಟಿಗಳು ಅದ್ಭುತವಾಗಿ ಮೂಡಿ ಬಂದಿರುವ ಈ ಚಿತ್ರದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಚಿತ್ರವು ಕೊಳ್ಳೆ ಹೊಡೆದಿರುವುದರಿಂದ

ಸಿನಿಮಾ ತಂಡವು ಈಗ ಮತ್ತಷ್ಟು ಪ್ರಚಾರದ ಕಾರ್ಯದಲ್ಲಿ ಮುಂದಾಗಿದೆ. ಇದರ ಭಾಗವಾಗಿ ನಾಯಕ ರಿಷಬ್ ಶೆಟ್ಟಿ ಮತ್ತು ನಟಿ ಸಪ್ತಮಿ ಗೌಡ ಶನಿವಾರ ದೆಹಲಿಯ ಇಂಡಿಯಾ ಗೇಟ್‌ಗೆ ಭೇಟಿ ನೀಡಿದ್ದರು. ಸಾಂಪ್ರದಾಯಿಕ ದೇಶಿ ಲುಕ್ ನಲ್ಲಿ ಕಂಗೊಳಿಸುತ್ತಿರುವ ಇಬ್ಬರು ನಟ ನಟಿಯರು ಕಾಂತಾರ ಚಿತ್ರದಿಂದಾಗಿ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ

ಕನ್ನಡ ಮತ್ತು ಹಿಂದಿ ಆವೃತ್ತಿಗಳಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದ ನಂತರ, ಅದರ ಬಾಕ್ಸ್ ಆಫೀಸ್ ಕಲೆಕ್ಷನ್ ಪ್ರತಿದಿನ ನಿರಂತರ ಏರಿಕೆಗೆ ಸಾಕ್ಷಿಯಾಗುತ್ತಿವೆ. ಕಾಂತಾರ ಚಿತ್ರದ ಹಿಂದಿ ಮಾರುಕಟ್ಟೆ ನವೆಂಬರ್ 4 ರವರೆಗೆ ಒಟ್ಟು 53.7 ಕೋಟಿ ರೂ ಗಳಿಸಿದೆ.