ಟಿಪ್ಪು ರೀತಿ ಸಿದ್ದರಾಮಯ್ಯರನ್ನ ಹೊಡೆದು ಹಾಕ್ಬೇಕು ಅಶ್ವಥ್ ನಾರಾಯಣ್ಕಟೀಲ್ ವಿರುದ್ಧ ಕಾಂಗ್ರೆಸ್ ನಿಯೋಗ ದೂರು

ಟಿಪ್ಪು ರೀತಿಯಲ್ಲಿ ಸಿದ್ದರಾಮಯ್ಯರನ್ನ ಹೊಡೆದು ಹಾಕಿ ಹೇಳಿಕೆ ನೀಡಿದ್ದ ಸಚಿವ ಅಶ್ವಥ್ ನಾರಾಯಣ್, ಟಿಪ್ಪು ವಂಶಸ್ಥರನ್ನು ಹೊಡೆದು ಹಾಕಿ ಎಂದ ನಳಿನ್ ಕುಮಾರ್ ಕಟೀಲ್ ಹೇಳಿಕ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ದೂರು ನೀಡಿದ್ದಾರೆ. ಈ ವಿಚಾರವಾಗಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಎಫ್ಐಆರ್ ದಾಖಲಿಸಲಾಗಿದೆ. ಕೂಡಲೇ ವಿಚಾರಣೆ ನಡೆಸಿ ಬಂಧಿಸಿಬೇಕು ತಪ್ಪಿದಲ್ಲಿ ಮಲ್ಲೇಶ್ವರಂ ಠಾಣೆಯ ಎದುರು ಕಾಂಗ್ರೆಸ್ ನಿಯೋಗವೇ ಪ್ರತಿಭಟನೆ ನಡೆಸಲಾಗುತ್ತದೆ ಕಾನೂನು ಮೂಲಕ ಹೊರಾಟ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಎಚ್ಚರಿಕೆ ಕೂಡಾ ನೀಡಲಾಗಿದೆ
ಈ ವಿಚಾರವಾಗಿ ಈಗಾಗಲೇ ಮಾಧ್ಯಮಗಳೊಂದಿಗೆ ಸಚಿವ ಅಶ್ವಥ್ ನಾರಾಯಣ್ ಮಾತನಾಡಿ, ನಾನು ವೈಯುಕ್ತಿಕವಾಗಿ ಹೇಳಿಲ್ಲ ನನ್ನ ಹೇಳಿಕೆಯನ್ನು ತಪ್ಪಾಗಿ ಅಥೈಯಿಸಲಾಗಿದೆ. ಸಿದ್ದರಾಮಯ್ಯಯನ್ನ ಹೊಡೆದು ಹಾಕಿ ಎಂದರೆ ಚುನಾವಣೆಯಲ್ಲಿ ಸೋಲಿಸಿ ಎಂದು ಅರ್ಥ, ಇದೀಗ ನಾನಿನ್ನು ಯುದ್ಧ ಕಾಲದಲ್ಲಿಲ್ಲ ಪ್ರಜಾಪ್ರಭುತ್ವದಲ್ಲಿದ್ದೇನೆ . ಆಕಾರಣಕ್ಕಾಗಿ ಚುನಾವಣೆಯಲ್ಲಿ ಅವರನ್ನು ಸೋಲಿಸಿ ಎಂದಿದ್ದೇನೆ . ನನ್ನ ಮಾತಿನಿಂದ ನೋವಾಗಿದ್ರೆ ವಿಷಾಧಿಸುತ್ತೇನೆ ಎಂದು ಭಾರೀ ವಿವಾದದ ಬಳಿಕ ಸಚಿವ ಅಶ್ವಥ್ ನಾರಾಯಣ್ ಕ್ಷಮೆಯಾಚಿಸಿದ್ದಾರೆ.