ಜಿಎಸ್ಟಿ ಬಾಕಿ ಪರಿಹಾರ ಬಿಡುಗಡೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಘೋಷಣೆ

ನವದೆಹಲಿ: ರಾಜ್ಯಗಳಿಗೆ 16,982 ಕೋಟಿ ರೂಪಾಯಿಗಳ ಸಂಪೂರ್ಣ ಜಿಎಸ್ಟಿ ಬಾಕಿ ಪರಿಹಾರ ಬಿಡುಗಡೆಗೊಳಿಸಲಾಗುವುದು ಎಂದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ. ಜಿಎಸ್ಟಿ ಕೌನ್ಸಿಲ್ನ 49ನೇ ಸಭೆ ಮುಗಿದ ಬೆನ್ನಲ್ಲೇ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಅಕೌಂಟೆಂಟ್ ಜನರಲ್ (ಎಜಿ) ಪ್ರಮಾಣಪತ್ರವನ್ನು ಸಲ್ಲಿಸಿದ ಆರು ರಾಜ್ಯಗಳಿಗೆ 16,524 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ದೆಹಲಿ, ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ ಆರು ರಾಜ್ಯಗಳು ಎಜಿ ಪ್ರಮಾಣಪತ್ರ ಸಲ್ಲಿಸಿವೆ.
ಜಿಎಸ್ಟಿ ಪರಿಹಾರವನ್ನು ಪಡೆಯಲು ರಾಜ್ಯಗಳಿಗೆ ಎಜಿ ಪ್ರಮಾಣಪತ್ರವನ್ನು ಸಲ್ಲಿಸುವುದು ಅಗತ್ಯವಾಗಿದ್ದರೂ, ಇದು ಪೂರ್ವಾಪೇಕ್ಷಿತವಲ್ಲ ಎಂದು ಸೀತಾರಾಮನ್ ಹೇಳಿದರು, ಏಕೆಂದರೆ 90 ಪ್ರತಿಶತ ಹಣವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಉಳಿದ ಮೊತ್ತವನ್ನು ನಂತರ ನೀಡಲಾಗುತ್ತದೆ. ಎಜಿ ಪ್ರಮಾಣಪತ್ರ ಸಲ್ಲಿಸಲಾಗಿದೆ.