ಚುನಾವಣಾ ತಯಾರಿ ನಡೆಸುತ್ತಿದ್ದ ಸ್ವತಂತ್ರ ಅಭ್ಯರ್ಥಿಗೆ ಶಾಕ್ ನೀಡಿದ ಜಿಲ್ಲಾಧಿಕಾರಿ!
ಬೀದರ್: ವಿಧಾನ ಸಭೆ ಚುನಾವಣೆ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ಅಭ್ಯರ್ಥಿಗೆ ಜಿಲ್ಲಾಧಿಕಾರಿ ಶಾಕ್ ನೀಡಿದ್ದಾರೆ.
ಬೀದರ್ ಜಿಲ್ಲೆಯ ಮೀಸಲು ಕ್ಷೇತ್ರ ಔರಾದನಿಂದ ರವೀಂದ್ರ ಸ್ವಾಮಿ ಸ್ಪರ್ಧೆಗೆ ಭರ್ಜರಿ ತಯಾರಿ ನಡೆಸುತ್ತಿದ್ದರು. ರವಿಂದ್ರ ಸ್ವಾಮಿ ಅವರ ಬೇಡ ಜಂಗಮ ಎಸ್ಸಿ ಪ್ರಮಾಣ ಪತ್ರ ಜಿಲ್ಲಾಧಿಕಾರಿ ರದ್ದು ಮಾಡಿದ್ದಾರೆ.ರವೀಂದ್ರ ಸ್ವಾಮಿ ಕಳೆದ ನಾಲ್ಕು ಐದು ವರ್ಷಗಳಿಂದ ಔರಾದ ಕ್ಷೇತ್ರದಲ್ಲಿ ಚುನಾವಣೆ ತಯಾರಿ ನಡೆಸುತ್ತಿದ್ದಾರೆ. ಔರಾದನಲ್ಲಿ ವಿಧಾನ ಸಭೆ ಚುನಾವಣೆಗೋಸ್ಕರ ಟಿಕೆಟ್ಗಾಗಿ ಜರ್ನಾಧನ ರೆಡ್ಡಿಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ,ಸೇರಿದಂತೆ ಹಲವು ಪಕ್ಷಗಳ ಮೊರೆ ಹೋಗಿದರು.
ಕೊನೆಗೂ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಲೆಕ್ಕಾಚಾರದಲ್ಲಿದ್ದ ರವೀಂದ್ರ ಸ್ವಾಮಿಯ ಬೇಡ ಜಂಗಮ ಪ್ರಮಾಣ ಪತ್ರ ರದ್ದು ಮಾಡಿದ್ದಾರೆ.
ಹಿಂದಿನಿಂದಲೂ ಬೇಡ ಜಂಗಮ ಪ್ರಮಾಣ ಪತ್ರ ರದ್ದು ಮಾಡಬೇಕೆಂದು ವಿವಿಧ ದಲಿತ ಸಂಘಟನೆಗಳು ಒತ್ತಾಯಿಸುತ್ತಿದರು. ಕೊನೆಗೂ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಔರಾದನ ರವೀಂದ್ರ ಸ್ವಾಮಿ ರವರ ಬೇಡ ಜಂಗಮ ಪತ್ರ ರದ್ದು ಮಾಡಿದ್ದಾರೆ. ಈ ಆದೇಶ ಬಂದಿರುವ ಹಿನ್ನೆಲೆಯಲ್ಲಿ ರವೀಂದ್ರ ಸ್ವಾಮಿ ಜಿಲ್ಲಾಧಿಕಾರಿಗಳ ಆದೇಶ ವಿರುದ್ಧ ನ್ಯಾಯಲಯದ ಮೊರೆ ಹೋಗುತ್ತೆನೆ ಎನ್ನುತ್ತಿದ್ದಾರೆ.