ಚಾಲಕನ ಚಾಣಕ್ಷತನದಿಂದ ತಪ್ಪಿದ ಅನಾಹುತ

ಚಾಲಕನ ಚಾಣಕ್ಷತನದಿಂದ ತಪ್ಪಿದ ಅನಾಹುತ

ಮಹಾರಾಷ್ಟ್ರದ ಮಹಾಬಲೇಶ್ವರ ಬಳಿ ಭಾರಿ ಅನಾಹುತವೊಂದು ತಪ್ಪಿದೆ. ಸತಾರಾ ರಸ್ತೆಯ ಘಾಟ್‌ನಲ್ಲಿ ಶಾಲಾ‌ ಪ್ರವಾಸಕ್ಕೆಂದು ಹೋಗಿದ್ದ ಸರ್ಕಾರಿ ಬಸ್ ಬ್ರೇಕ್ ಫೇಲ್​​ ಆಗಿದೆ. ಚಾಲಕ ಚಾಣಕ್ಷತನದಿಂದ ಭಾರಿ ಅನಾಹುತ ತಪ್ಪಿದ್ದಾರೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಸ್.ಡಿ.ಹೈಸ್ಕೂಲ್‌ನ ಮಕ್ಕಳು, ಸಿಬ್ಬಂದಿ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರವಾಸಕ್ಕೆ ಹೋಗಿದ್ದ ವೇಳೆ ಘಾಟ್‌ನಲ್ಲಿ ಬ್ರೇಕ್ ಫೇಲ್ ಆಗಿ ಬಸ್‌ ಪ್ರಪಾತಕ್ಕೆ ಉರುಳುತ್ತಿತ್ತು. ಈ ವೇಳೆ ಚಾಲಕ ಗುಡ್ಡಕ್ಕೆ ತಾಗಿಸಿ ನಿಲ್ಲಿಸಿದ್ದಾನೆ.