ಕಾಡು ಪ್ರಾಣಿಗಳಿಂದ ಬೆಳೆ ನಷ್ಟಕ್ಕೆ ಒಳಗಾದ ರೈತರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ದುಪ್ಪಟ್ಟು ಹೆಚ್ಚಿಸಿ ಆದೇಶ
ಬೆಂಗಳೂರು: ರಾಜ್ಯ ಸರ್ಕಾರದಿಂದ ಕಾಡು ಪ್ರಾಣಿಗಳ ಹಾವಳಿಯಿಂದ ಆಗುವಂತ ಬೆಳೆ ನಷ್ಟಕ್ಕೆ ನೀಡುವಂತ ಪರಿಹಾರವನ್ನು ದುಪ್ಪಟ್ಟು ಹೆಚ್ಚಳ ಮಾಡಲಾಗಿದೆ. ಈ ಮೂಲಕ ರಾಜ್ಯದ ರೈತರಿಗೆ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ.
ಈ ಸಂಬಂಧ ಅಧಿಕೃತವಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರ ಬೆಳೆಹಾನಿ ಪರಿಹಾರ ಹಣ ದುಪ್ಪಟ್ಟು ಮಾಡಿದ್ದರಿಂದ ರೈತರ ಬಹುಕಾಲದ ಬೇಡಿಕೆ ಈಡೇರಿದಂತೆ ಆಗಿದೆ. ಅಲ್ಲದೇ ಜಾನುವಾರುಗಳ ಪ್ರಾಣ ಹಾನಿ ಮತ್ತು ಬೆಳೆ ಹಾನಿಗೆ ಪರಿಹಾರ ಹೆಚ್ಚಿಸಿದ್ದು, ಗ್ರಾಮೀಣ ಜನರಿಗೆ ನೆರವಾದಂತೆ ಆಗಿದೆ.
ಅಂದಹಾಗೇ ಅಡಿಕೆ, ತೆಂಗು, ಭತ್ತ, ಮಾವು, ನೆಲಗಡಲೆ, ರಾಗಿ, ಟೊಮ್ಯಾಟೋ, ಹಿಪ್ಪು ನೇರಳೆ ಸೇರಿದಂತೆ 64 ಬೆಳೆಗಳಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಈ ಹಿಂದಿನ ಬೆಳೆಹಾನಿ ಪರಿಹಾರಕ್ಕಿಂತ, ಈಗ ದುಪ್ಪಟ್ಟು ಹೆಚ್ಚಿಸಲಾಗಿದೆ.