ಕಾಂತಾರ' ನೋಡಿ ಕೂಗಿ ಕೂಗಿ ಸುಸ್ತಾದ ಈ ನಟಿ ಎರಡನೇ ಸಲ ನೋಡುವಾಗ ಮಾಡಿದ್ದೇನು?

ಬೆಂಗಳೂರು: 'ಕಾಂತಾರ' ಸಿನಿಮಾ ನೋಡಿದ ಬಳಿಕ ಅದರ ಅನುಭವದ ಬಗ್ಗೆ ಕರಾವಳಿ ಬೆಡಗಿಯರಾದ ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ ಈಗಾಗಲೇ ತಮ್ಮ ಅನಿಸಿಕೆ ಹೇಳಿಕೊಂಡಿದ್ದರೆ, ಇದೀಗ ಕರಾವಳಿ ಮೂಲದ ಇನ್ನೊಬ್ಬ ನಟಿ ಕೂಡ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣ, ರಿಷಬ್ ಶೆಟ್ಟಿ ರಚನೆ-ನಿರ್ದೇಶನದಲ್ಲಿ ಮೂಡಿಬಂದು ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಕಾಂತಾರ'ವನ್ನು ಈಕೆ ಒಂದಲ್ಲ, ಎರಡು ಸಲ ನೋಡಿದ್ದಾರೆ. ಅದರಲ್ಲೂ ಎರಡನೇ ಸಲ ನೋಡಲು ಹೋಗುವಾಗ ಸುಮ್ಮನೆ ಹೋಗಿಲ್ಲ ಎಂಬುದನ್ನೂ ಹೇಳಿಕೊಂಡಿದ್ದಾರೆ.
ನಾನು ಮೊದಲನೇ ಸಲ 'ಕಾಂತಾರ' ಚಿತ್ರವನ್ನು ಬೆಂಗಳೂರಿನಲ್ಲಿ ನೋಡಿ, ನನ್ನ ಧ್ವನಿಯನ್ನೇ ಕಳೆದುಕೊಂಡಿದ್ದೆ. ಖಂಡಿತವಾಗಿಯೂ ಅದು ಸಿನಿಮಾ ನೋಡುವಾಗ ಕೂಗಿ ಕೂಗಿಯೇ ಹಾಗಾಗಿದ್ದು. ಹೀಗಾಗಿ ಎರಡನೇ ಸಲ ಕಾಂತಾರವನ್ನು ಮುಂಬೈನದಲ್ಲಿ ನೋಡುವಾಗ ವಿಸಲ್ ತೆಗೆದುಕೊಂಡು ಹೋಗಿದ್ದೆ ಎಂಬುದಾಗಿ ಆವಂತಿಕಾ ಹೇಳಿಕೊಂಡಿದ್ದಾರೆ. ಇಂಥದ್ದೊಂದು ಸುಂದರ ಕಲಾತ್ಮಕ ಸಿನಿಮಾ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದು ಅವರು ರಿಷಬ್ ಶೆಟ್ಟಿಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.