ಕತ್ತಿಯಿಂದ ಕೊಚ್ಚಿ ಯುವತಿಯ ಬರ್ಬರ ಹತ್ಯೆ

ಕೊಡಗು: ಕತ್ತಿಯಿಂದ ಕೊಚ್ಚಿ ಯುವತಿಯನ್ನು ಬರ್ಬರ ಕೊಲೆ ಮಾಡಿರುವ ಘಟನೆ ವಿರಾಜಪೇಟೆ ತಾ|ನ ನಾಂಗಲ ಗ್ರಾಮದಲ್ಲಿ ನಡೆದಿದ್ದು, ಗ್ರಾಮದ ಮಂದಿ ಬೆಚ್ಚಿಬಿದ್ದಿದ್ದಾರೆ. ಕೊಲೆಯಾದ ಯುವತಿಯನ್ನು ನಾಂಗಲ ಗ್ರಾಮದ ಬುಟ್ಟಿಯಂಡಪ್ಪ ಮಾದಪ್ಪ, ಸುನಂದ ಅವರ ಪುತ್ರಿ ಬುಟ್ಟಿಯಂಡ ಆರತಿ ಎಂದು ಗುರುತಿಸಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.