ಎಲ್‌ಒಸಿ ಬಳಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಮುಂದಾದ NGO ಭೂಮಿಪೂಜೆಗೆ ಪುಣ್ಯಭೂಮಿಯ ಮಣ್ಣು

ಎಲ್‌ಒಸಿ ಬಳಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಮುಂದಾದ NGO  ಭೂಮಿಪೂಜೆಗೆ ಪುಣ್ಯಭೂಮಿಯ ಮಣ್ಣು

ಪುಣೆ ಮೂಲದ ಸ್ವಯಂ ಸೇವಾ ಸಂಸ್ಥೆಯೊಂದು ಗಡಿ ನಿಯಂತ್ರಣಾ ರೇಖೆ ಬಳಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಸಿದ್ದತೆ ನಡೆಸಿದೆ. ಫೆಬ್ರವರಿ 14 ರಂದು 'ಅಮ್ಹಿ ಪುಣೇಕರ್' (ನಾವು ಪುಣೇಕರ್) ಎಂಬ ಎನ್‌ಜಿಒ ಈ ವಿಷಯ ತಿಳಿಸಿದ್ದು,

ಶತ್ರುಗಳ ವಿರುದ್ಧ ಹೋರಾಡುವ ಸೈನಿಕರು ಪ್ರತಿನಿತ್ಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ನೋಡುವ ಮೂಲಕ ಅವರ ಆದರ್ಶ ಮತ್ತು ನೈತಿಕ ಮೌಲ್ಯಗಳಿಂದ ಪ್ರೇರೇಪಿಸಲ್ಪಡುತ್ತಾರೆ, ಹಿಂದೂ ರಾಜನ ಶೌರ್ಯವನ್ನು ನೆನಪಿಸಿಕೊಳ್ಳುತ್ತಾರೆ.

ಹಾಗೂ ಹೋರಾಡಲು ಮತ್ತಷ್ಟು ಶಕ್ತಿಯನ್ನು ಪಡೆಯುತ್ತಾರೆ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ.

ವರದಿಗಳ ಪ್ರಕಾರ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಕಾಶ್ಮೀರದ ಕಿರಣ್ ಮತ್ತು ತಂಗ್‌ಧರ್-ತಿಟ್ವಾಲ್ ಕಣಿವೆಗಳಲ್ಲಿ ಎರಡು ಸ್ಥಳಗಳಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಸ್ಥಾಪಿಸಲಾಗುವುದು.

ಕುಪ್ವಾರ ಜಿಲ್ಲಾಧಿಕಾರಿ ಡಾ. ಸಾಗರ್ ದತ್ತಾತ್ರೇಯ ದೋಯ್ಪೋಡೆ ಅವರ ಅನುಮತಿ ಮೇರೆಗೆ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ.

ಛತ್ರಪತಿ ಶಿವಾಜಿ ಮಹಾರಾಜ್ ಅಟಕೇಪರ್ ಸ್ಮಾರಕ ಸಮಿತಿ ಮುಖ್ಯಸ್ಥ ಅಭಯರಾಜ್ ಶಿರೋಳೆ ಮತ್ತು 'ಅಮ್ಹಿ ಪುಣೇಕರ್' ಎನ್‌ಜಿಒ ಅಧ್ಯಕ್ಷ ಹೇಮಂತ್ ಜಾಧವ್ ಇದನ್ನು ಯೋಜಿಸಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಹೇಮಂತ್ ಜಾಧವ್, "ಮಾರ್ಚ್ ಅಂತ್ಯದೊಳಗೆ ಪ್ರತಿಮೆ ಸ್ಥಾಪನೆ ಕಾಮಗಾರಿಯ ಭೂಮಿಪೂಜೆ ನಡೆಯಲಿದೆ.

ಶಿವರಾಯರ ಪಾದದಿಂದ ಪಾವನವಾದ ರಾಯಗಡ, ತೋರಣ, ಶಿವನೇರಿ, ರಾಜ್‌ಗಡ ಮತ್ತು ಪ್ರತಾಪಗಡ ಕೋಟೆಗಳ ಮಣ್ಣು ಮತ್ತು ನೀರನ್ನು ಆಮ್ಹಿ ಪುಣೇಕರ್ ಎನ್‌ಜಿಒ ಭೂಮಿ ಪೂಜೆಗಾಗಿ ಕಾಶ್ಮೀರಕ್ಕೆ ಕೊಂಡೊಯ್ಯುತ್ತದೆ ಎಂದರು.

ಅಭಯರಾಜ ಶಿರೋಳೆ ಮಾತನಾಡಿ, "ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ರಣತಂತ್ರ ಹಾಗೂ ಸಾಹಸದಿಂದ ಶತ್ರುಗಳನ್ನು ಸದೆಬಡಿದಿದ್ದರು.

ಪ್ರಪಂಚದ ವಿವಿಧ ದೇಶಗಳು ಅವರ ಗೆರಿಲ್ಲಾ ಯುದ್ಧ ತಂತ್ರಗಳನ್ನು ಅನುಸರಿಸುತ್ತವೆ. ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಭಾರತ-ಪಾಕಿಸ್ತಾನ ಗಡಿಯಲ್ಲಿ ಸ್ಥಾಪಿಸಲಾಗುತ್ತಿದೆ.

ಇದರಿಂದ ಗಡಿಯಲ್ಲಿರುವ ಭಾರತೀಯ ಸೈನಿಕರಿಗೆ ಶಿವರಾಯರ ಆದರ್ಶಗಳು ಮತ್ತು ಪ್ರತಿಮೆಯ ಮೂಲಕ ಪ್ರೇರಣೆಯೊಂದಿಗೆ ಸ್ಫೂರ್ತಿ ನೀಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಈ ಹಿಂದೆ ಅಂದರೆ ಜನವರಿ 2022 ರಲ್ಲಿ ಮರಾಠಾ ರೆಜಿಮೆಂಟ್, ಛತ್ರಪತಿ ಶಿವಾಜಿ ಮಹಾರಾಜರ ಎರಡು ಪ್ರತಿಮೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಾಪಿಸಿರುವುದು ಗಮನಾರ್ಹವಾಗಿದೆ.

ಇವುಗಳಲ್ಲಿ ಒಂದನ್ನು ಸಮುದ್ರ ಮಟ್ಟದಿಂದ 14800 ಅಡಿ ಎತ್ತರದಲ್ಲಿ ಎಲ್‌ಒಸಿ ಬಳಿ ಸ್ಥಾಪಿಸಲಾಗಿದೆ. ಈಗ ಮತ್ತೆರಡು ಪ್ರತಿಮೆಗಳನ್ನು ಪುಣೆ ಮೂಲದ ಎನ್‌ಜಿಒಗಳು ಸ್ಥಾಪಿಸಲು ಮುಂದಾಗಿದೆ.