ಎಡಬಿಡಂಗಿಗಳಿಗೆ ಇತಿಹಾಸವಿಲ್ಲ, ಇತಿಹಾಸವೂ ಗೊತ್ತಿಲ್ಲ. ಇದರಿಂದಲೇ ಇವರಿಗೆ ಭೂತಕಾಲ, ವರ್ತಮಾನದ ಕಾಲವೂ ಅರ್ಥವಾಗುತ್ತಿಲ್ಲ. ಭವಿಷ್ಯತ್ ಕಾಲದ ಕುರಿತು ಅರಿವಿಲ್ಲ. ಅದಕ್ಕಾಗಿ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮೈಸೂರು: ದೇಶಕ್ಕೆ ಇತಿಹಾಸ ಬಹಳ ಮುಖ್ಯ ಎಂಬುದು ಇಂದಿನ ಆಳುವ ಎಡಬಿಡಂಗಿಗಳಿಗೆ ಚೆನ್ನಾಗಿ ಗೊತ್ತಿರುವುದರಿಂದಲೇ ವಾಟ್ಸ್ಆಯಪ್ ಯೂನಿವರ್ಸಿಟಿಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಾ, ನಿಜ ಚರಿತ್ರೆಯನ್ನು ತಿರುಚುವ ಹುನ್ನಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ಪರೋಕ್ಷವಾಗಿ ಬಹುಭಾಷಾ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.
ಜೈಭೀಮಾ ಕೋರೆಂಗಾವ್ ವಿಜಯೋತ್ಸವ ಸಮಿತಿಯಿಂದ ಅಶೋಕಪುರಂ ಬಳಿ ಇರುವ ಜಯನಗರ ರೈಲ್ವೆ ಗೇಟ್ ಬಳಿ ಇರುವ ಕೋರೆಂಗಾವ್ ಸ್ಥಂಭಕ್ಕೆ ರವಿವಾರ ಪುಷ್ಪಾರ್ಚನೆ ಮಾಡಿ ಭೀಮಾ ಕೋರೆಗಾಂವ್ 205ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಎಡಬಿಡಂಗಿಗಳಿಗೆ ಇತಿಹಾಸವಿಲ್ಲ, ಇತಿಹಾಸವೂ ಗೊತ್ತಿಲ್ಲ. ಇದರಿಂದಲೇ ಇವರಿಗೆ ಭೂತಕಾಲ, ವರ್ತಮಾನದ ಕಾಲವೂ ಅರ್ಥವಾಗುತ್ತಿಲ್ಲ. ಭವಿಷ್ಯತ್ ಕಾಲದ ಕುರಿತು ಅರಿವಿಲ್ಲ.