ಹಿಂದೆ ನನ್ನ ಬೈದವರೆಲ್ಲ ಚಂದಾಗಿರಲಿ: ಕನಕದಾಸರ ವಚನದ ಮೂಲಕ ಎದುರಾಳಿಗೆ ಡಿಚ್ಚಿಕೊಟ್ಟ ಡಾಲಿ ಧನಂಜಯ್

ಹಿಂದೆ ನನ್ನ ಬೈದವರೆಲ್ಲ ಚಂದಾಗಿರಲಿ: ಕನಕದಾಸರ ವಚನದ ಮೂಲಕ ಎದುರಾಳಿಗೆ ಡಿಚ್ಚಿಕೊಟ್ಟ ಡಾಲಿ ಧನಂಜಯ್

ಬೆಂಗಳೂರು: ಇಂದು ರಾಜ್ಯ ಎಲ್ಲೆಡೆ ಸಂತ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಜಾತಿ, ಮತ, ಧರ್ಮಗಳ ಹಂಗಿಲ್ಲದೇ ಆಚರಣೆ ಮಾಡಲಾಗುತ್ತಿದೆ. ಈ ನಡುವೆ ನಟ ಡಾಲಿ ಧನಂಜಯ್‌ ತಮ್ಮ ಎದುರಾಳಿಗಳಿಗೆ ಕನಕ ದಾಸ ವಚನದ ಮೂಲಕ ಟಾಂಗ್‌ ನೀಡಿದ್ದಾರೆ.

ಕನಕದಾಸರ ರಚನೆಯ ' ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ, ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ, ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ, ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ. ಜನರೊಳಗೆ ಮಾನಭಂಗ ಮಾಡಿದವರಿಗೆ ಜೇನು ತುಪ್ಪು, ಸಕ್ಕರೆ ಊಟ ಆಗಲಿ ಅವರಿಗೆ. ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ. ಮಹಾನುಭಾವ ಮುಕ್ತಿಯ ಕೊಡುವ ನೆಲೆಯಾದಿಕೇಶವ' ಎಂದು ದಾಸರ ಪದವನ್ನು ಅವರು ಹಂಚಿಕೊಂಡಿದ್ದಾರೆ.