ಪ್ರಯಾಗರಾಜ್ ಮಾಘ ಮೇಳ : ಸಂಗಮದಲ್ಲಿ ಮಿಂದೆದ್ದ 2 ಲಕ್ಷ ಭಕ್ತರು

ಹಿಂದೂ ಕ್ಯಾಲೆಂಡರ್ ಪ್ರಕಾರ, ಪುಷ್ಯ ಮಾಸದ ಹುಣ್ಣಿಮೆ ಅಥವಾ ಹುಣ್ಣಿಮೆಯ ತಿಥಿಯನ್ನು ಪುಷ್ಯ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ದಿನ ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಮಹತ್ವದ್ದಾಗಿದೆ. ಈ ದಿನದಂದು ಪ್ರಯಾಗರಾಜ್ ಪವಿತ್ರ ಸಂಗಮದಲ್ಲಿ ಸುಮಾರು 2 ಲಕ್ಷ ಭಕ್ತರು ತೀರ್ಥ ಸ್ನಾನ ಮಾಡುವ ಮೂಲಕ ತಿಂಗಳ ಕಾಲ ನಡೆಯುವ ಮಾಘಮೇಳಕ್ಕೆ ಚಾಲನೆ ದೊರೆಯಿತು. ಬೆಳಗಿನ ಜಾವ 4 ಗಂಟೆಯಿಂದಲೇ ಗಂಗಾ, ಯಮುನಾ & ಸರಸ್ವತಿ ಸಂಗಮದ ಸ್ನಾನಘಟ್ಟಗಳಿಗೆ ಆಗಮಿಸಿದ ಭಕ್ತರು ವಿಪರೀತ ಚಳಿಯ ನಡುವೆಯೂ ಪವಿತ್ರ ತೀರ್ಥದಲ್ಲಿ ಮಿಂದೆದ್ದರು.