''ನನ್ನ ತಾಯಿ, ಅಜ್ಜಿ ಗುಣಗಳ ಮಿಶ್ರಣವಿರುವ ಮಹಿಳೆಗೆ ಆದ್ಯತೆ'' : ಜೀವನ ಸಂಗಾತಿ ಬಗ್ಗೆ ರಾಹುಲ್ ಗಾಂಧಿ ಮಾತು

''ನನ್ನ ತಾಯಿ, ಅಜ್ಜಿ ಗುಣಗಳ ಮಿಶ್ರಣವಿರುವ ಮಹಿಳೆಗೆ ಆದ್ಯತೆ'' : ಜೀವನ ಸಂಗಾತಿ ಬಗ್ಗೆ ರಾಹುಲ್ ಗಾಂಧಿ ಮಾತು

ವದೆಹಲಿ : ಭಾರತ್ ಜೋಡೊ ಯಾತ್ರೆಯಿಂದ ಕೊಂಚ ವಿರಾಮ ಪಡೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಜೀವನ ಸಂಗಾತಿ ಹೇಗಿರಬೇಕು ಎಂಬುದರ ಕುರಿತಂತೆ ಹೇಳಿಕೊಂಡಿದ್ದಾರೆ.

'ಭಾರತ್ ಜೋಡೊ ಯಾತ್ರೆ' ಸಂದರ್ಭದಲ್ಲಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಗಾ, ತನ್ನ ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ಅವರ ಗುಣಗಳ ಮಿಶ್ರಣವನ್ನು ಹೊಂದಿರುವ ಸಂಗಾತಿಯೊಂದಿಗೆ ಜೀವನದಲ್ಲಿ ನೆಲೆಗೊಳ್ಳಲು ನಾನು ಆದ್ಯತೆ ನೀಡುತ್ತೇನೆ ಎಂದೇಳಿದ್ದಾರೆ.

ತಮ್ಮ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು 'ನನ್ನ ಜೀವನದ ಪ್ರೀತಿ ಮತ್ತು ನನ್ನ ಎರಡನೇ ತಾಯಿ' ಎಂದು ಕರೆದಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ನಾನು ಮಹಿಳೆಗೆ ಆದ್ಯತೆ ನೀಡುತ್ತೇನೆ. ಅವಳು ಯಾವ ಗುಣಗಳನ್ನು ಹೊಂದಿದ್ದಾಳೆ ಎಂಬುದರ ಬಗ್ಗೆ ನನಗೆ ತೊಂದರೆ ಇಲ್ಲ. ಆದರೆ, ನನ್ನ ತಾಯಿ ಮತ್ತು ಅಜ್ಜಿಯ ಗುಣಗಳನ್ನು ಹೊಂದಿರುವ ಸಂಗಾತಿ ಸಿಕ್ಕರೆ ಒಳಿತು ಎಂದಿದ್ದಾರೆ.