ಕಾಗವಾಡ ಶಾಸಕರ ಪುತ್ರನ ಕಾರನ್ನು ತಪಾಸಣೆ ಮಾಡದ ʻಚೆಕ್ ಪೋಸ್ಟ್ ಸಿಬ್ಬಂದಿʼ : ತಹಶೀಲ್ದಾರ್ ತರಾಟೆಗೆ

ಕಾಗವಾಡ ಶಾಸಕರ ಪುತ್ರನ ಕಾರನ್ನು ತಪಾಸಣೆ ಮಾಡದ ʻಚೆಕ್ ಪೋಸ್ಟ್ ಸಿಬ್ಬಂದಿʼ : ತಹಶೀಲ್ದಾರ್ ತರಾಟೆಗೆ

ಚಿಕ್ಕೋಡಿ: ಮುಂದಿನ ವಿಧಾನ ಸಭೆ ಚುನಾವಣೆ ಡೇಟ್‌ ಫಿಕ್ಸ್‌ ಆದ ಬೆನ್ನಲ್ಲೆ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ವಾಹನ ತಪಾಸನೆ ಮಾಡಲಾಗುತ್ತದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಹೊರವಲಯದ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಮಧ್ಯದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.

ಇಲ್ಲಿ ಪ್ರತಿಯೊಂದು ವಾಹನಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈವೇಳೆ ಕಾಗವಾಡ ಶಾಸಕರ ಪುತ್ರನ ಕಾರು ಸಂಚಾರ ಮಾಡುತ್ತಿದ್ದರು, ಚೆಕ್ ಪೋಸ್ಟ್ ಸಿಬ್ಬಂದಿ ತಡೆಯಲಿಲ್ಲ. ಈ ಸಂಬಂಧ ಚೆಕ್ ಪೋಸ್ಟ್ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿದ್ದಾರೆ. ಅಷ್ಟೇ ಅಲ್ಲದೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೇಲಾಧಿಕಾರಿಗಳಿಗೆ ಮೌಖಿಕವಾಗಿ ದೂರು ಸಲ್ಲಿಸಿದ್ದಾರೆ. ಒಬ್ಬರಿಗೆ ಒಂದು ರೂಲ್ಸ್‌ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಈ ಘಟನೆ ಸಂಬಂಧಿ ಘಟನಾ ಸ್ಥಳಕ್ಕೆ ತಹಶೀಲ್ದಾರ್ ಬಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಘಟನೆ ಬೆಳಕಿಗೆ ಬಂದಿದೆ .