ಇಲ್ಲಿ ಯಾರೂ ಬಾಸ್ ಅಲ್ಲ ಎಂದ ಶಿವಣ್ಣ; 'ವಂಶ'ಕ್ಕೆ ಕೌಂಟರ್ ಕೊಟ್ಟ ದರ್ಶನ್ ಫ್ಯಾನ್ಸ್!

ಫ್ಯಾನ್ ವಾರ್ ಸದ್ಯ ಚಂದನವನದಲ್ಲಿ ತಾರಕಕ್ಕೇರಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕ್ರಾಂತಿ ಚಿತ್ರತಂಡ ತಮ್ಮ ಚಿತ್ರದ ಎರಡನೇ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ ಘಳಿಗೆಯಿಂದ ಹೊತ್ತಿಕೊಂಡ ಫ್ಯಾನ್ ವಾರ್ ಕಿಡಿ ಈಗ ಬೆಂಕಿಯಾಗಿ ಉರಿಯುತ್ತಿದೆ.
ಇನ್ನು ಇದೇ ದಿನ ಕಿಡಿಗೇಡಿಯೋರ್ವ ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದ. ಈ ಕೃತ್ಯವನ್ನು ಯಾರು ಮಾಡಿದರು ಎಂಬುದು ತಿಳಿಯುವ ಮೊದಲೇ ಇದನ್ನು ಅಪ್ಪು ಅಭಿಮಾನಿಗಳೇ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿಕೊಂಡಿತ್ತು. ಈಗಲೂ ಸಹ ಇದು ಉತ್ತರ ಸಿಗದಿರುವ ಪ್ರಶ್ನೆಯೇ. ಈ ಘಟನೆ ಬಳಿಕ ಪುನೀತ್ ರಾಜ್‌ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಹೆಚ್ಚಾಗಿಬಿಟ್ಟಿದೆ.