ಅತಿವೇಗದ ಪರಿಣಾಮ ನಿಯಂತ್ರಣಕ್ಕೆ ಸಿಗದೆ ರಸ್ತೆಯಲ್ಲೇ ಪಲ್ಟಿಯಾದ ಟಾಟಾ ಏಸ್

ಅತಿವೇಗದ ಪರಿಣಾಮ ನಿಯಂತ್ರಣಕ್ಕೆ ಸಿಗದೆ ರಸ್ತೆಯಲ್ಲೇ ಪಲ್ಟಿಯಾದ ಟಾಟಾ ಏಸ್

ಬೆಂಗಳೂರು : ಟೈಲ್ಸ್ ಸಾಗಿಸುತ್ತಿದ್ದ ಟಾಟಾ ಏಸ್ ವಾಹನ ರಸ್ತೆಯಲ್ಲೆ ಪಲ್ಟಿಯಾದ ಘಟನೆ ತಡರಾತ್ರಿ ಮತ್ತಿಕೆರೆಯ ಬಿಇಎಲ್ ಸರ್ಕಲ್ ನಲ್ಲಿ ನಡೆದಿದೆ. ಹೆಬ್ಬಾಳದಿಂದ ಗೊರಗುಂಟೆಪಾಳ್ಯ ಮಾರ್ಗವಾಗಿ ಬರುತ್ತಿದ್ದ ಟಾಟಾ ಏಸ್ ಚಾಲಕ ರಸ್ತೆ ಹಂಪ್ ನಲ್ಲಿ ದಿಢೀರನೇ ಬ್ರೇಕ್ ಹಾಕಿರುವ ಪರಿಣಾಮ ನಿಯಂತ್ರಣಕ್ಕೆ ಸಿಗದೇ ಅವಘಡ ಸಂಭವಿಸಿದೆ

ಘಟನೆಯಲ್ಲಿ ಚಾಲಕ ಸೇರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮತ್ತಿಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಪರಿಣಾಮ ಕೆಲಕಾಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಜಾಲಹಳ್ಳಿ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.