6 ತಿಂಗಳಲ್ಲಿ ಬಿಡುಗಡೆ ಆಗಲಿದ್ದ ಕೈದಿಗೆ ಜೈಲಿನಲ್ಲೇ ಹೃದಯಾಘಾತ.

6 ತಿಂಗಳಲ್ಲಿ ಬಿಡುಗಡೆ ಆಗಲಿದ್ದ ಕೈದಿಗೆ ಜೈಲಿನಲ್ಲೇ ಹೃದಯಾಘಾತ.

ನೇಕಲ್: ಹೃದಯಾಘಾತದಿಂದ ಜೈಲಿನಲ್ಲಿ ಕೈದಿಯೊಬ್ಬ ಸಾವಿಗೀಡಾಗಿದ್ದಾರೆ.

ಪ್ರಕರಣ ಒಂದರಲ್ಲಿ ಏಳು ವರ್ಷ ಶಿಕ್ಷೆಗೆ ಒಳಗಾಗಿದ್ದ ಆರೋಪಿ ಇದೀಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಆನೇಕಲ್ ತಾಲೂಕಿನ ರಾಯಸಂದ್ರ ಮೂಲದ ಸೋಮಶೇಖರ್ ಇನ್ನೇನು 6 ತಿಂಗಳಲ್ಲೇ ಬಿಡುಗಡೆ ಆಗಿ ಹೊಸ ಬಾಳು ಶುರು ಮಾಡಲಿದ್ದ.

ಆದರೆ ವಿಧಿಯ ಆಟ ಬೇರೆಯದೇ ಆಗಿದ್ದು ಜೈಲಿನಲ್ಲಿ ಇದ್ದಾಗಲೇ ಈತನಿಗೆ ಹೃದಯಾಘಾತ ಉಂಟಾಗಿದೆ.

ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಸೋಮಶೇಖರ್ ಮೃತಪಟ್ಟಿದ್ದಾನೆ.