ಹಾಸನದಲ್ಲಿ ಯುವತಿಯ ಕೈ ಹಿಡಿದು ಎಳೆದು ಚುಡಾಯಿಸಿದ ʼವಿಕೃತ ಕಾಮಿಗೆ ಹಿಗ್ಗಾಮುಗ್ಗಾ ಧರ್ಮದೇಟುʼ

ಹಾಸನದಲ್ಲಿ ಯುವತಿಯ ಕೈ ಹಿಡಿದು ಎಳೆದು ಚುಡಾಯಿಸಿದ ʼವಿಕೃತ ಕಾಮಿಗೆ ಹಿಗ್ಗಾಮುಗ್ಗಾ ಧರ್ಮದೇಟುʼ

ಹಾಸನ: ಹಾಸನ ನಗರದ ಬಿಎಸ್‌ಎನ್‌ಎಲ್ ಭವನದ ಬಳಿ ಕಾಲೇಜಿನಿಂದ ಮನೆಗೆ ತೆರಳಿದ್ದ ಯುವತಿಯ ಕೈ ಹಿಡಿದು ಎಳೆದು ಯುವತಿಗೆ ಚುಡಾಯಿಸಿದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಧರ್ಮದೇಟು ನೀಡಿದ ಘಟನೆ ನಡೆದಿದೆ.

ಯುವತಿ ಹಾಸನದ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಶಾಲೆ ಬಿಟ್ಟು ಮನೆ ತೆರಳುವ ಸಂಧರ್ಭದಲ್ಲಿ ಪ್ರತಿನಿತ್ಯ ಆಕೆಗೆ ಕಿರುಕುಳ ನೀಡುತ್ತಿದ್ದನು, ನಿನ್ನೆ ಯುವತಿಯ ಕೈ ಹಿಡಿದು ಎಳೆದ ಯುವತಿಗೆ ಚುಡಾಯಿಸಿದಕ್ಕೆ ಯುವಕ ಬೇಸತ್ತ ಯುವತಿ ಸೇರಿದಂತೆ ಕಾಮಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಹೊಡೆದ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ. ಹಾಸನ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ತಿಳಿಯಲಾಗಿದೆ.