ವಾಹನ ಸವಾರ'ರಿಗೆ ಭರ್ಜರಿ ಗುಡ್ ನ್ಯೂಸ್ : ಫೆ.11ರೊಳಗೆ ದಂಡ ಕಟ್ಟಿದರೇ 'ಶೇ.50 ರಿಯಾಯಿತಿ'

ವಾಹನ ಸವಾರ'ರಿಗೆ ಭರ್ಜರಿ ಗುಡ್ ನ್ಯೂಸ್ : ಫೆ.11ರೊಳಗೆ ದಂಡ ಕಟ್ಟಿದರೇ 'ಶೇ.50 ರಿಯಾಯಿತಿ'

ಬೆಂಗಳೂರು :ವಾಹನ ಸವಾರರಿಗೆ ಸಾರಿಗೆ ಇಲಾಖೆಯು ಭರ್ಜರಿ ಸಿ

ಹಿಸುದ್ದಿಯೊಂದನ್ನು ನೀಡಿದ್ದು, ಫೆ.11 ರೊಳಗೆ ಟ್ರಾಫಿಕ್ ಫೈನ್ ಕಟ್ಟಿದರೆ ಶೇ. 50 ರಷ್ಟು ರಿಯಾಯಿತಿಯನ್ನು ಘೋಷಣೆ ಮಾಡಿದೆ.

ಈ ಹಿಂದೆ ರಾಜ್ಯ ಹೈಕೋರ್ಟ್‌ನ ನ್ಯಾಯಾಧೀಶರಾದ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಈ ಬಗ್ಗೆ ಮನವಿ ಮಾಡಿಕೊಂಡಿದ್ದರು.

ಈ ಹಿನ್ನಲೆಯಲ್ಲಿ ನ್ಯಾಯಮೂರ್ತಿಗಳ ಮನವಿ ಮೇರೆಗೆ ಈ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಈ ಆದೇಶವು ಫೆ 11ರೊಳಗೆ ಟ್ರಾಫಿಕ್‌ ಫೈನ್‌ ಕಟ್ಟುವವರಿಗೆ ಮಾತ್ರ ಅನ್ವಯವಾಗಲಿದೆ. ಇದು ಸೀಮತ ಅವಧಿಯಲ್ಲಿ ನಡೆಯಲಿದೆ. ಈ ಮೂಲಕ ನಿಗದಿತ ದಿನಾಂಕದೊಳಗೆ ಟ್ರಾಫಿಕ್ ರೂಲ್ಸ್‌ ಉಲ್ಲಂಘನೆ ಮಾಡಿ ದಂಡವನ್ನು ಪಾವತಿ ಮಾಡದೇ ತಪ್ಪಿಸಿಕೊಂಡು ಓಡಾಡುತ್ತಿರುವವರು ಮುಂದಿನ ಕಾನೂನಿನ ಕುಣಿಕೆಯಿಂದ ಬಚಾವ್‌ ಆಗಲು ಇದು ಸುವರ್ಣ ಅವಕಾಶವನ್ನು ನೀಡಿದೆ. ಫೆ 11ರಂದು ಲೋಕ ಅದಾಲತ್ ನಡೆಯಲಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಈ ನಿರ್ಧಾರವನ್ನು ಮಾಡಿದೆ