ಲ್ಯಾಂಡ್ ಜಿಹಾದ್ ಮಾಫಿಯಾಕ್ಕೆ ಬಲಿಯಾದರೇ ಡಾ. ಕೃಷ್ಣಮೂರ್ತಿ?

ಮಂಗಳೂರು: ಕಾಸರಗೋಡಿನಲ್ಲಿ ಇತ್ತೀಚೆಗೆ ಪ್ರಖ್ಯಾತ ದಂತ ವೈದ್ಯರೊಬ್ಬರು ಸಾವಿಗೀಡಾಗಿದ್ದರ ಹಿಂದೆ ಲ್ಯಾಂಡ್ ಜಿಹಾದ್ ಮಾಫಿಯಾದ ಒತ್ತಡ ಇತ್ತೇ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.
ಬದಿಯಡ್ಕದಲ್ಲಿ ಕಳೆದ 30 ವರ್ಷಗಳಿಂದ ದಂತ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.
ಲ್ಯಾಂಡ್ ಮಾಫಿಯಾದವರು ಆರು ತಿಂಗಳಿನಿಂದ ಒಂದು ಜಾಗದ ವಿಚಾರದಲ್ಲಿ ಡಾ. ಕೃಷ್ಣಮೂರ್ತಿ ಅವರ ಬೆನ್ನು ಬಿದ್ದಿದ್ದರು. ಜಾಗ ಖರೀದಿ ವಿಚಾರದಲ್ಲಿ ಡಾ. ಕೃಷ್ಣಮೂರ್ತಿಗೆ ಸ್ಥಳೀಯ ಕೆಲ ಮುಸ್ಲಿಮರ ಕಿರುಕುಳ ಇತ್ತು. ನ. 8ರಂದು ಬದಿಯಡ್ಕದ ಕ್ಲಿನಿಕ್‌ಗೆ ಡಾ.ಕೃಷ್ಣಮೂರ್ತಿ ಬಂದಿದ್ದರು. ಈ ವೇಳೆ ಕ್ಲಿನಿಕ್‌ಗೆ ಮುಸ್ಲಿಂ ಯುವತಿಯೊಬ್ಬಳು ಬಂದಿದ್ದಳು. ಬಳಿಕ ಆಕೆಯ ಜತೆ ವೈದ್ಯರು ಅನುಚಿತವಾಗಿ ನಡೆದುಕೊಂಡರು ಎಂಬ ಆರೋಪ ಕೇಳಿಬಂತು. ಇದನ್ನೇ ಮುಂದಿಟ್ಟುಕೊಂಡು ಡಾ. ಕೃಷ್ಣಮೂರ್ತಿ ಅವರಿಗೆ ಬೆದರಿಕೆ ಒಡ್ಡಿದ್ದ ಕೆಲವರು ಹಲ್ಲೆಗೆ ಕೂಡ ಮುಂದಾಗಿದ್ದರು. ಆ ಘಟನೆಯ ಬಳಿಕ ಡಾ. ಕೃಷ್ಣಮೂರ್ತಿ ನಾಪತ್ತೆಯಾಗಿದ್ದರು.
ವಿಎಚ್‌ಪಿ ಮೂಲಗಳು ಹೇಳುವ ಪ್ರಕಾರ, ಲ್ಯಾಂಡ್ ಮಾಫಿಯಾದವರು ಮುಸ್ಲಿಂ ಯುವತಿಯ ಮೂಲಕ ವೈದ್ಯರನ್ನ ಬ್ಲಾಕ್‌ಮೇಲ್ ಮಾಡಿದ್ದರು. ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬ್ಲ್ಯಾಕ್ಮೇಲ್ಗೆ ಹೆದರಿ ಡಾ.ಕೃಷ್ಣಮೂರ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಮುಸ್ಲಿಂ ಲೀಗ್ ಮುಖಂಡರು ಸೇರಿ ಐವರನ್ನು ಬದಿಯಡ್ಕ ಪೊಲೀಸರು ವಶಕ್ಕೆ ವಶಕ್ಕೆ ಪಡೆದಿದ್ದಾರೆ.
ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯತ್ ಕಾರ್ಯದರ್ಶಿ ಅಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಬದಿಯಡ್ಕ ಪಂಚಾಯತ್ ಪದಾಧಿಕಾರಿ ಮುಹಮ್ಮದ್ ಹನೀಫ ಯಾನೆ ಅನ್ವರ್, ಕುಂಬ್ಡಾಜೆ ನಿವಾಸಿ ಅಶ್ರಫ್, ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ನಿವಾಸಿ ಉಮರುಲ್ ಫಾರೂಕ್ ಎಂಬುವವರು ಪೊಲೀಸ್ ವಶದಲ್ಲಿ ಇದ್ದಾರೆ. ಈ ಎಲ್ಲ ಅಂಶಗಳು ಡಾ. ಕೃಷ್ಣಮೂರ್ತಿ ಲ್ಯಾಂಡ್ ಮಾಫಿಯಾ ಕುತಂತ್ರಕ್ಕೆ ಬಲಿಯಾಗಿದ್ದಾರೆ ಎಂಬುದನ್ನು ದೃಢಪಡಿಸುತ್ತವೆ ಎನ್ನುತ್ತಾರೆ ಸ್ಥಳೀಯ ವಿಎಚ್‌ಪಿ ಮುಖಂಡರು.