ಮೈಸೂರಲ್ಲಿ ಮತ್ತೆ ಚಿರತೆ ಆತಂಕ ಸೃಷ್ಟಿ : CFTRI ಆವರಣದ ಶಾಲೆಯಲ್ಲಿ ಪ್ರತ್ಯಕ್ಷ
ಚಿರತೆ ನೋಡುತ್ತಿದ್ದಂತೆ ಶಿಕ್ಷಕರು ಎಚ್ಚೆತ್ತಕೊಂಡಿದ್ದಾರೆ. ಎಲ್ಲಾ ಮಕ್ಕಳನ್ನು ವಾಪಾಸ್ ಮನೆಗಳಿಗೆ ಕಳುಹಿಸಿದ್ದಾರೆ. ಒಂಟಿಕೊಪ್ಪಲು, ಪಡುವಾರಹಳ್ಳಿ, ನಿವಾಸಿಗಳಲ್ಲೂ ಆತಂಕ ಹೆಚ್ಚಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.