ಮಾಜಿ ಗೆಳತಿ ಕುತ್ತಿಗೆ ಕುಯ್ಯಲು ನೋಡಿದ ಸಬ್ ಇನ್ಸ್‌ಪೆಕ್ಟರ್: ಸಾವಿನಿಂದ ಜಸ್ಟ್ ಪಾರಾದ ಯುವತಿ
ಜನರ ರಕ್ಷಣೆಗಾಗಿ ನಿಲ್ಲಬೇಕಾಗಿದ್ದ ಪೊಲೀಸ್ ಒಬ್ಬ ಈಗ ಯುವತಿ ಜೀವಕ್ಕೆ ಕುತ್ತು ತಂದಿಟ್ಟಿದ್ದಾರೆ. ಇತ್ತೀಚೆಗೆ ಅಸ್ಸಾಂನ ಮಾಜುಲಿ ಎಂಬ ಗ್ರಾಮದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತನ್ನ ಮಾಜಿ ಪ್ರಿಯತಮೆಯನ್ನು ಬ್ಲೇಡ್‌ನಿಂದ ಕೊಲ್ಲುವುದಕ್ಕೆ ನೋಡಿದ್ದಾನೆ.
ಈ ರೀತಿಯ ಕೃತ್ಯ ಮಾಡಿದ್ದ ವ್ಯಕ್ತಿಯನ್ನ ಸಬ್‌ಇನ್ಸ್‌ಪೆಕ್ಟರ್ ಪರಾಗ್ ಚೌಧರಿ ಎಂದು ಗುರುತಿಸಲಾಗಿದ್ದು, ಈತ ಕಮಲಾವಾಡಿ ಪೊಲೀಸ್ ಸ್ಟೇಷನ್‌ನಲ್ಲಿ ಡ್ಯೂಟಿ ಮಾಡುತ್ತಿದ್ದನು.
ಒಂದು ಮಾಹಿತಿ ಪ್ರಕಾರ, ಪರಾಗ್ ಬ್ಲೇಡ್ ತೆಗೆದುಕೊಂಡು ಮಾಜಿ ಗೆಳತಿಯ ಕುತ್ತಿಗೆ ಕುಯ್ಯುವುದಕ್ಕೆ ನೋಡಿದ್ದಾನೆ. ಈ ಘಟನೆಯಲ್ಲಿ ಆಕೆಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಜೊರಹಾಟ್ ರೆಫರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಈ ಹಿಂದೆ ಅಂದರೆ 13 ಮಾರ್ಚ್ 2022ರಲ್ಲಿಯೂ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಆಗಲೂ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬ ತನ್ನ ನಾಲ್ಕು ತಿಂಗಳ ತುಂಬು ಬಸುರಿ ಹೆಂಡತಿಯನ್ನೇ ಗುಂಡು ಹೊಡೆದು ಸಾಯಿಸಿದ್ದ.
ಮಾಹಿತಿ ಪ್ರಕಾರ, ಬಿಕಿ ಚೆತಿಯಾ ಅನ್ನೊ ಹೆಸರಿನ ಆರೋಪಿ ನಾಲ್ಕು ವರ್ಷದ ಹಿಂದೆಯೇ ಮದುವೆಯಾಗಿದ್ದ. ಗಂಡ-ಹೆಂಡತಿ ನಡುವೆ ಆಗಾಗ ವಾದ ವಿವಾದಗಳು ನಡೆಯುತ್ತಲೇ ಇದ್ದವು. ಆ ದಿನವೂ ಗಂಡ-ಹೆಂಡತಿ ನಡುವೆ ಗಲಾಟೆ ನಡೆದಿದೆ. ಆದರೆ ಆ ದಿನ ಆತ ಕುಡಿದು ಬಂದಿದ್ದ. ಅದೇ ಅಮಲಿನಲ್ಲಿ ಆತ ಹೆಂಡತಿ ಮೇಲೆ ಗುಂಡು ಹಾರಿಸಿದ್ದಾನೆ. ಆ ನಂತರ ಆತ ತಾನು ಮಾಡಿದ್ದ ಅಪರಾಧವನ್ನ ಒಪ್ಪಿಕೊಂಡಿದ್ದ.
ಈ ಘಟನೆಯ ನಂತರ ಸೈಕ್ಡೋ ಗ್ರಾಮದ ಜನರು ಸ್ಥಳೀಯ ಡಿಬ್ರೂಗಢ್ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದರು.