ಮನೀಷ್‌ ಸಿಸೋಡಿಯಾ ಬಂಧನ ಸೃಷ್ಟಿಸದ ಅನಿಶ್ಚಿತತೆ

ಮನೀಷ್‌ ಸಿಸೋಡಿಯಾ ಬಂಧನ ಸೃಷ್ಟಿಸದ ಅನಿಶ್ಚಿತತೆ

ವದೆಹಲಿ: ಅಬಕಾರಿ ಹಗರಣ ಸಂಬಂಧ ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರ ಬಂಧನ ಆಪ್‌ ಸರ್ಕಾರದ ಹಲವು ಯೋಜನೆಗಳ ಮುಂದುವರಿಕೆಗೆ ತೊಡಕಾಗಿದ್ದು, ಜಿ-20 ಶೃಂಗ ಸಭೆ ಸಿದ್ಧತೆ ಸೇರಿದಂತೆ ಹಲವು ನಿರ್ಣಾಯಕ ಯೋಜನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಆಪ್‌ ಸರ್ಕಾರದ 33 ಇಲಾಖೆಗಳ ಪೈಕಿ 18 ಇಲಾಖೆಗಳ ಜವಾಬ್ದಾರಿಯನ್ನು ಸಿಸೋಡಿಯಾ ಅವರೇ ಹೊಂದಿದ್ದಾರೆ. ಶಿಕ್ಷಣ, ಆರೋಗ್ಯ, ಪಿಡಬ್ಲೂéಡಿ ಸೇರಿದಂತೆ ಇನ್ನಿತರ ಪ್ರಮುಖ ಖಾತೆಗಳನ್ನು ಅವರು ನಿರ್ವಹಿಸುತ್ತಿದ್ದರು. ಸಚಿವ ಸತ್ಯೇಂದ್ರ ಜೈನ್‌ ಬಂಧನದ ಬಳಿಕ ಆರೋಗ್ಯ ಮತ್ತು ಗೃಹ ಇಲಾಖೆಯ ಹೊಣೆಯೂ ಅವರ ಹೆಗಲೇರಿತ್ತು.

ಈಗ ಸಿಸೋಡಿಯಾ ಬಂಧನವಾಗಿದ್ದು, ಡಿಸಿಎಂ ಅನುಪಸ್ಥಿತಿಯಲ್ಲಿ ಯೋಜನೆಗಳು ಮುಕ್ಕಾಗಿವೆ. ಜಿ-20 ಶೃಂಗಸಭೆ ನಿಮಿತ್ತ ಯುರೋಪಿಯನ್‌ ಮಾನದಂಡಗಳಿಗೆ ಹೋಲುವ ರಸ್ತೆ ನಿರ್ಮಾಣ ಸೇರಿದಂತೆ ಸರ್ಕಾರದ ಹಲವು ಮಹತ್ವಾಕಾಂಕ್ಷೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಸ್ವತಃ ತಾವೇ ಅಧಿಕಾರಿಗಳ ಜತೆಗೆ ಸಭೆ ನಡೆಸಿ, ಸಿಸೋಡಿಯಾ ಅಭಿವೃದ್ಧಿ ಪರಿಶೀಲನೆ ನಡೆಸುತ್ತಿದ್ದರು ಎಂದು ಆಪ್‌ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವುದಕ್ಕೆಲ್ಲ ಅಡ್ಡಿ ?
*ರಸ್ತೆಗಳ ಅಗಲೀಕರಣ ಯೋಜನೆ ಅನ್ವಯದ 16 ರಸ್ತೆಗಳ ಕಾಮಗಾರಿ
*540 ಕಿ.ಮೀ ವ್ಯಾಪ್ತಿಯ ದಟ್ಟಣೆ ಕಡಿಮೆ ಹಾಗೂ ನಗರಾಭಿವೃದ್ಧಿ ಯೋಜನೆ
*1,000 ಕೋಟಿ ವೆಚ್ಚದ ಜಿ-20 ಶೃಂಗಸಭೆ ಕಾರ್ಯಕ್ರಮಗಳ ಮೇಲ್ವಿಚಾರಣೆ
*ರಸ್ತೆಯಲ್ಲಿ ಪಾದಚಾರಿ ಮಾರ್ಗ, ಕುಡಿಯುವ ನೀರಿನ ನಲ್ಲಿ ಅಳವಡಿಕೆ ಕ್ರಮ