ಮತ್ತೆ ಮುನ್ನೆಲೆಗೆ ಬಂದ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ : ಬಜರಂಗ ಕಾರ್ಯಕರ್ತರಿಂದ ಹೈಕೋರ್ಟ್​​ಗೆ ಪಿಐಎಲ್​ ಸಲ್ಲಿಕೆ

ಮತ್ತೆ ಮುನ್ನೆಲೆಗೆ ಬಂದ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ : ಬಜರಂಗ ಕಾರ್ಯಕರ್ತರಿಂದ ಹೈಕೋರ್ಟ್​​ಗೆ ಪಿಐಎಲ್​ ಸಲ್ಲಿಕೆ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಮತ್ತೆ ಶುರುವಾಗಿದೆ. ಈ ಕುರಿತು ಬಜರಂಗದಳ ಕಾರ್ಯಕರ್ತರು ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಇದೀಗ ಕಾರ್ಯಕರ್ತರು ಹೈಕೋರ್ಟ್​​ಗೆ ಪಿಐಎಲ್​ ಸಲ್ಲಿಸಿದ್ದಾರೆ.

ಟಿಪ್ಪು ಆಡಳಿತದ ವೇಳೆ ಕೋಟೆ ಆಂಜನೇಯ ದೇವಾಲಯವನ್ನ ಮಸೀದಿ ಮಾಡಲಾಗಿದೆ. ಜಾಮಿಯಾ ಮಸೀದಿಯಲ್ಲಿ ಹಿಂದೂ ದೇವರ ಕುರುಹುಗಳಿವೆ. ಹಾಗಾಗಿ ಕೂಡಲೇ ಜಾಮಿಯಾ ಮಸೀದಿಯನ್ನ ತೆರವುಗೊಳಿಸಬೇಕು. ಪವಿತ್ರ ಕಲ್ಯಾಣಿಯಲ್ಲಿ ತೀರ್ಥ ಸ್ನಾನಕ್ಕೆ ಅವಕಾಶ ಕಲ್ಪಿಸಬೇಕು. ಹನುಮನ ಪೂಜೆಗೆ ಅನುವು ಮಾಡಿ ಕೊಡಬೇಕೆಂದು ಬಜರಂಗಸೇನೆ ಕಾರ್ಯಕರ್ತರು ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ.

ವಕೀಲ ರವಿಶಂಕರ್ ಮೂಲಕ ಭಜರಂಗ ಸೇನೆ ನೇತೃತ್ವದಲ್ಲಿ 108 ಹನುಮ ಭಕ್ತರು ಹೈಕೋರ್ಟ್‌ಗೆ ದಾವೆ ಹೂಡಿದ್ದಾರೆ. ಬಜರಂಗಸೇನೆ ರಾಜ್ಯಾಧ್ಯಕ್ಷ ಮಂಜುನಾಥ್‌ ದಾಖಲೆ ಸಮೇತ ಕೋರ್ಟ್ ಮೆಟ್ಟಿಲೇರಿದ್ದಾರೆ. ಹಿಂದೂಗಳ ಮಂಗಳಕರ ಸಂಖ್ಯೆ ಎಂಬ ಕಾರಣಕ್ಕೆ 108 PIL ಸಲ್ಲಿಸಲಾಗಿದೆ. ಹನುಮಂತನನ್ನೇ ಪ್ರತಿವಾದಿ ಮಾಡಿ ಮಂದಿರಕ್ಕಾಗಿ ಹೋರಾಟ ನಡೆಸಲಾಗುತ್ತಿದೆ.