ಪುರುಷರ ವೀರ್ಯ ಸಂಖ್ಯೆ ಹೆಚ್ಚಿಸುತ್ತೆ ಈ ಆಹಾರ
ಆಹಾರಕ್ಕೆ ಪ್ರತ್ಯೇಕ ರುಚಿ ನೀಡುವ ಶಕ್ತಿ ಈರುಳ್ಳಿಗಿದೆ. ಅಡುಗೆ ಮನೆಯಲ್ಲಿರುವ ಈ ಈರುಳ್ಳಿ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ, ಸೌಂದರ್ಯ ವೃದ್ಧಿಗೂ ನೆರವಾಗುತ್ತದೆ. ಕೆಲವರಿಗೆ ಇದ್ರ ವಾಸನೆ ಇಷ್ಟವಾಗುವುದಿಲ್ಲ. ಆದ್ರೆ ಇದ್ರ ಗುಣಗಳನ್ನು ತಿಳಿದ್ರೆ ವಾಸನೆ ಇಷ್ಟವಾಗದವರೂ ಈರುಳ್ಳಿ ತಿನ್ನಲು ಶುರು ಮಾಡ್ತಾರೆ.
ಉರಿಯೂತವನ್ನು ಕಡಿಮೆ ಮಾಡುವ ಶಕ್ತಿಯೊಂದಿಗೆ ಅಲರ್ಜಿ ವಿರುದ್ಧ ಹೋರಾಡುವ, ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಇದಕ್ಕಿದೆ. ಈರುಳ್ಳಿ ಅನೇಕ ರೋಗಗಳಿಗೆ ಮದ್ದು. ಈರುಳ್ಳಿ ತಿನ್ನುವುದ್ರಿಂದ ಮನುಷ್ಯನ ಆಯಸ್ಸು ಹೆಚ್ಚಾಗುತ್ತದೆ ಎನ್ನುತ್ತಾರೆ ಕೆಲವರು.
ಈರುಳ್ಳಿ, ಚರ್ಮ ಸುಕ್ಕುಗಟ್ಟುವುದನ್ನು ತಡೆಯುವ ಜೊತೆಗೆ ಶರೀರ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ವೀರ್ಯ ವೃದ್ಧಿಗೆ ಈರುಳ್ಳಿ ಒಳ್ಳೆ ಮದ್ದು. ಬಿಳಿ ಈರುಳ್ಳಿ ರಸವನ್ನು ಜೇನು ತುಪ್ಪದ ಜೊತೆ ಬೆರೆಸಿ ಕುಡಿಯಬೇಕು. ಬಿಳಿ ಈರುಳ್ಳಿ ರಸ, ಜೇನುತುಪ್ಪ, ಶುಂಠಿ ರಸ ಹಾಗೂ ತುಪ್ಪವನ್ನು ಸತತ 21 ದಿನಗಳ ಕಾಲ ಕುಡಿದ್ರೆ ನಪುಂಸಕತೆ ದೂರವಾಗುತ್ತದೆ.
ಈರುಳ್ಳಿಯನ್ನು ಬೆಲ್ಲದ ಜೊತೆ ತಿನ್ನುವುದ್ರಿಂದ ವೀರ್ಯ ವೃದ್ಧಿಯಾಗುತ್ತದೆ. ಮಧುಮೇಹಿ ರೋಗಿಗಳಿಗೂ ಈರುಳ್ಳಿ ಬಹಳ ಪ್ರಯೋಜನಕಾರಿ. ಸಂಧಿವಾತ ರೋಗಿಗಳಿಗೂ ಈರುಳ್ಳಿ ಒಳ್ಳೆ ಮನೆ ಮದ್ದು.