27 ರಂದು ರಾಜ್ಯಕ್ಕೆ ಮತ್ತೊಮ್ಮೆ ಪ್ರಧಾನಿ ಮೋದಿ ಭೇಟಿ : ಬೆಳಗಾವಿಯಲ್ಲಿ ಬೃಹತ್ `ರೋಡ್ ಶೋ'ಗೆ ಸಿದ್ಧತೆ

27 ರಂದು ರಾಜ್ಯಕ್ಕೆ ಮತ್ತೊಮ್ಮೆ ಪ್ರಧಾನಿ ಮೋದಿ ಭೇಟಿ : ಬೆಳಗಾವಿಯಲ್ಲಿ ಬೃಹತ್ `ರೋಡ್ ಶೋ'ಗೆ ಸಿದ್ಧತೆ

ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಅವರು ಫೆ. 27 ಕ್ಕೆ ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡಲಿದ್ದು, ಫೆ. 27 ರಂದು ಶಿವಮೊಗ್ಗ, ಬೆಳಗಾವಿ ಜಿಲ್ಲೆಗೆ ಆಗಮಿಸಲಿದ್ದು, ಬೆಳಗಾವಿಯಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಫೆ.27ರಂದು ಬೆಳಗಾವಿಗೆ ಆಗಮಿಸಲಿದ್ದು, ಬೆಳಗಾವಿಯಲ್ಲಿ ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿದ್ದೇವೆ.

ಮೊದಲ ಬಾರಿಗೆ ಕರ್ನಾಟಕದಿಂದ ರೈತ ಕಿಸಾನ್ ಸಮ್ಮಾನ್ ಯೋಜನೆ ನಿಧಿ ರೈತ ಖಾತೆಗೆ ಹಾಕಲಿದ್ದಾರೆ. ಕರ್ನಾಟಕದಿಂದ 14 ಕೋಟಿ ರೈತರ ಖಾತೆಗೆ 2 ಲಕ್ಷ 70 ಸಾವಿರ ಕೋಟಿ ಹಣ ಹಾಕಲಿದ್ದಾರೆ ಎಂದು ಹೇಳಿದ್ದಾರೆ.ಪ್ರಧಾನಿ ಮೋದಿ ಕಾರ್ಯಕ್ರಮದ ಪೂರ್ವ ತಯಾರಿ ನಡೆಯುತ್ತಿದೆ. ಫೆ. 27ರ ಬೆಳಗ್ಗೆ ಶಿವಮೊಗ್ಗ ಏರ್‌ಪೋರ್ಟ್ ದೇಶಕ್ಕೆ ಸಮರ್ಪಿಸಿ ಬೆಳಗಾವಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಮೋದಿ ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ರೋಡ್‌ ಶೋಗೆ ದೊಡ್ಡ ಸಂಖ್ಯೆಯಲ್ಲಿ ರೈತರು, ರೈತ ಮಹಿಳೆಯರು ಬರಲಿದ್ದಾರೆ ಎಂದು ತಿಳಿಸಿದ್ದಾರೆ.