ಮಸೀದಿ ಮೇಲೆ ಬಂದೂಕುಧಾರಿ ಗುಂಪು ದಾಳಿ: ಧರ್ಮ ಗುರು ಸೇರಿ 12 ಮಂದಿ ಬಲಿ

ನವದೆಹಲಿ: ಬಂದೂಕುಧಾರಿ ಡಕಾಯಿತರ ಗುಂಪೊಂದು ಮಸೀದಿಯೊಂದರ ಮೇಲೆ ದಾಳಿ ಮಾಡಿ 12 ಮಂದಿಯನ್ನು ಕೊಂದು, ಇತರರನ್ನು ಅಪಹರಿಸಿರುವ ಘಟನೆ ನೈಜೀರಿಯಾದಲ್ಲಿ ಡಿ.3 ( ಶನಿವಾರದಂದು) ರಾತ್ರಿ ನಡೆದಿದೆ ಎಂದು ವರದಿ ತಿಳಿಸಿದೆ.
ಮೈಗಾಮ್ಜಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಗುಂಪೊಂದು ಏಕಾಏಕಿ ಗುಂಡು ಹಾರಿಸಲು ಶುರು ಮಾಡಿದೆ.
ಇಷ್ಟು ಮಾತ್ರವಲ್ಲದೆ ಡಕಾಯಿತರು ಗ್ರಾಮಸ್ಥರಲ್ಲಿ ಹಣಕ್ಕೆ ಬೇಡಿಕೆಯಿಟ್ಟು ಕೆಲವರನ್ನು ಅಪಹರಿಸಿಕೊಂಡು ಓಡಿದ್ದಾರೆ ಎಂದು ವರದಿ ತಿಳಿಸಿದೆ.
ಪೊಲೀಸರು ಬಂದೂಕುಧಾರಿ ಗುಂಪಿನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಸ್ಥಳೀಯರು ಕೆಲ ಭಕ್ತರನ್ನು ರಕ್ಷಣೆ ಮಾಡಿದ್ದರೆಂದು ಪೊಲೀಸರು ಹೇಳಿದ್ದಾರೆ.