ಕುಡಿದ ಮತ್ತಲ್ಲಿ ತನ್ನ 12 ನೇ ಪತ್ನಿಯನ್ನು ಬರ್ಬರವಾಗಿ ಹೊಡೆದು ಕೊಂದ ಪತಿ

ಕುಡಿದ ಮತ್ತಲ್ಲಿ ತನ್ನ 12 ನೇ ಪತ್ನಿಯನ್ನು ಬರ್ಬರವಾಗಿ ಹೊಡೆದು ಕೊಂದ ಪತಿ

ಜಾರ್ಖಂಡ್‌: ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಲ್ಲಿ ತನ್ನ 12 ನೇ ಪತ್ನಿಯನ್ನು ಹೊಡೆದು ಕೊಂರಿರುವ ಘಟನೆ ನಡೆದಿದೆ.

ಆರೋಪಿ ರಾಮಚಂದ್ರ ತುರಿ ಎಂಬಾತ ತನ್ನ 40 ವರ್ಷದ ಪತ್ನಿಯನ್ನು ಭಾನುವಾರ ಕೋಲಿನಿಂದ ಬರ್ಬರವಾಗಿ ಹೊಡೆದು ಕೊಂದಿದ್ದಾನೆ.

ತಾರಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗವಾನ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ ನಂತರ, ಅವರು ಆರೋಪಿಯನ್ನು ಬಂಧಿಸಿ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕಳುಹಿಸಿದ್ದಾರೆ.

ಪೊಲೀಸರ ಪ್ರಕಾರ, ಈ ವ್ಯಕ್ತಿ ಹನ್ನೊಂದು ಮಹಿಳೆಯರನ್ನು ಮದುವೆಯಾಗಿದ್ದು, ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ. ಹೀಗಾಗಿ ಅವರೆಲ್ಲರೂ ಅವನನ್ನು ತೊರೆದಿದ್ದರು. 12 ನೇ ಪತ್ನಿಯಾದ ಸಾವಿತ್ರಿದೇವಿಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಆಕೆಯನ್ನು ಇದೀಗ ಹೊಡೆದು ಕೊಂದಿದ್ದಾನೆ.

ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.