ಆಧಾರ್ ಕಾರ್ಡ್ ಅಪ್ ಡೇಟ್ ಕುರಿತಂತೆ ಇಲ್ಲಿದೆ ಮುಖ್ಯ ಮಾಹಿತಿ

ಆಧಾರ್ ಕಾರ್ಡ್ ಅಪ್ ಡೇಟ್ ಕುರಿತಂತೆ ಇಲ್ಲಿದೆ ಮುಖ್ಯ ಮಾಹಿತಿ

ಕೊಪ್ಪಳ : ಕೊಪ್ಪಳ ಜಿಲ್ಲೆಯ ನಾಗರಿಕರು ತಮ್ಮ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುವಂತೆ ಕೊಪ್ಪಳ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ತಿಳಿಸಿದ್ದಾರೆ.

ಭಾರತ ಸರ್ಕಾರದ ನಿರ್ದೇಶನದಂತೆ, ಕೊಪ್ಪಳ ಜಿಲ್ಲೆಯ ನಿವಾಸಿಗಳು ಆಧಾರ್ ನೀಡಿದ ಸಮಯ ಅಥವಾ 10 ವರ್ಷದಿಂದ ಅದೇ ವಿಳಾಸದಲ್ಲಿ ವಾಸಿಸುತ್ತಿದ್ದರೂ ಸಹ ಆ ನಿವಾಸಿಗಳು ತಮ್ಮ ಆಧಾರ್ ಅನ್ನು ನವೀಕರಿಸಬೇಕಾಗಿದ್ದು, ಅಂತಹ ನಿವಾಸಿಗಳು ಸಮರ್ಪಕ (ಪುಷ್ಟೀಕರಿಸುವ) ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ತಮ್ಮ ವಿಳಾಸವನ್ನು ಮರು ಮೌಲ್ಯಮಾಪನ (ರೀವ್ಯಾಲುವೇಶನ್) ಮಾಡಬೇಕಾಗಿರುತ್ತದೆ.

ಈ ಕುರಿತಂತೆ ನಿವಾಸಿಗಳ ಆಧಾರ್ ನವೀಕರಣವನ್ನು ಸಕ್ರಿಯಗೊಳಿಸಲು, ಯುಐಡಿಎಐ ಹೊಸ ವೈಶಿಷ್ಟತೆಯ 'ಡಾಕ್ಯುಮೆಂಟ್ ಅಪ್‌ಡೇಟ್' ಅನ್ನು ಅಭಿವೃದ್ಧಿಪಡಿಸಲಾಗಿದೆ. ನಿವಾಸಿಗಳು 'ಮೈ ಆಧಾರ್ ಪೋರ್ಟಲ್'' ಮೂಲಕ, ವೆಬ್‌ಸೈಟ್ತಿ  ನಲ್ಲಿ ಅಥವಾ ಯಾವುದೇ ಆಧಾರ್ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಆಧಾರ್ ಅನ್ನು ನವೀಕರಿಸಬಹುದಾಗಿದೆ. ಈ ಹೊಸ ವೈಶಿಷ್ಟö್ಯವು ಆಧಾರ್ ಹೊಂದಿರುವವರಿಗೆ ಯಾವುದೇ ಜನಸಂಖ್ಯಾ ವಿವರಗಳನ್ನು ಬದಲಾಯಿಸದೇ ಆಧಾರ್‌ನಲ್ಲಿ ಗುರುತಿನ ಪುರಾವೆ (ಪ್ರೂಫ್ ಆಫ್ ಐಡೆಂಟಿಟೀ) ಮತ್ತು ವಿಳಾಸದ ಪುರಾವೆ (ಪ್ರೂಫ್ ಆಪ್ ಅಡ್ರೆಸ್) ದಾಖಲೆಗಳನ್ನು ನವೀಕರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.