ಸ್ವಚ್ಛಭಾರಕ್ಕೂ ಸಿಎಂ ಕ್ಷೇತ್ರಕ್ಕೂಸಂಬಂಧವಿಲ್ಲವೇ?

ಸ್ವಚ್ಛಭಾರಕ್ಕೂ ಸಿಎಂ ಕ್ಷೇತ್ರಕ್ಕೂಸಂಬಂಧವಿಲ್ಲವೇ?

ಶಿಗ್ಗಾವಿ : ಸ್ವಚ್ಛಭಾರಕ್ಕೂ ಸಿಎಂ ಕ್ಷೇತ್ರಕ್ಕೂ ಸಂಬಂಧವಿಲ್ಲವೇ? ಹೀಗೊಂದು ಪ್ರಶ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕ್ಷೇತ್ರದ ಪ್ರಮುಖ ಪಟ್ಟಣವಾದ ಶಿಗ್ಗಾವಿ ನಾಗರಿಕರಿಗೆ ಕಾಡುತ್ತಿದೆ. ಇದಕ್ಕೆ ಪಟ್ಟಣದ ಶಂಕರಗೌಡ್ರ ಚಾಳದ ರಸ್ತೆಜೀವಂತ ಸಾಕ್ಷಿ. 
ಹೌದು, ಪಟ್ಟಣದಲ್ಲಿನ ಕೆಲ ಪ್ರದೇಶಗಳಲ್ಲಿನ ಕಸ ರಸ್ತೆಯನ್ನೇ ನುಂಗುವAತಾಗಿದೆ. ಚರಂಡಿ ಪಕ್ಕಕ್ಕೆ ಸಂಗ್ರಹವಾದ ಕಸದ ರಾಶಿ ಗಟಾರುಗಳಲ್ಲಿ ತುಂಬಿ ಮಳೆ ನೀರು ಹರಿದು ಹೋಗದೇ ರಸ್ತೆ ಮೇಲೆ, ಓಣಿಗಳಲ್ಲಿ ನಿಂತು ಸೊಳ್ಳೆಗಳು, ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ. ಮಳೆನೀರು-ಕಸ ಜೊತೆಸೇರಿ ಕೊಳೆತು ಉಂಟಾದ ದುರ್ನಾತ ಜನರಿಗೆ ತಲೆನೋವು ಉಂಟುಮಾಡಿದೆ.
ಜಯನಗರ, ಟೆಂಪೊ ಸ್ಟಾಡ್, ಹಳೆ ಬಸ್ ನಿಲ್ದಾಣದ ಹಿಂದುಗಡೆ ಪ್ರದೇಶಗಳಲ್ಲಿ ಕಸಕಡ್ಡಿ ತುಂಬಿ ತುಳುಕುತ್ತಿದೆ.
ಪಟ್ಟಣದ ಶಂಕರಗೌಡ್ರ ಚಾಳದ ಪಕ್ಕೆದಲ್ಲಿನ ಕಸ ಸಂಗ್ರಹವಾಗಿ ತಿಂಗಳುಗಳೇ ಕಳೆದರೂ ಸಂಬAಧಸಿದ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಪುರಸಭೆಯ ಆಡಳಿತ ಪಕ್ಷದ ಸದಸ್ಯರ ಮಾತೂ ಕೇಳುತ್ತಿಲ್ಲ ಎಂದು ಪುರಸಭೆ ಸದಸ್ಯ ಸಿದ್ದಾರ್ಥಗೌಡ ಪಾಟೀಲ ಅವರು ಆಕ್ರೋಶ ವ್ಯಕ್ತಿಪಡಿದ್ದಾರೆ. 

ಸಿಎಂ ತವರು ಕ್ಷೇತ್ರದಲ್ಲಿಯೇ ಉಂಟಾದ ಇಂತಹದೊAದು ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸದೇ ಹಾರಿಕೆ ಉತ್ತರ ಕೊಡುತ್ತಾ ದಿನ ದೂಡುತ್ತಿದ್ದಾರೆ. ವಿಪರ್ಯಾಸವೆಂದರೆ ಸಾರ್ವಜನಿಕ ಹಿತದೃಷ್ಟಿಯಿಂದ ಪುರಸಭೆ ಸದಸ್ಯರೇ ಖಾಸಗಿ ವ್ಯಕ್ತಿಗಳಿಂದ ಚರಂಡಿ ಸ್ವಚ್ಛ ಮಾಡಿಸಿ ನೀರು ಹರಿದು ಹೋಗುವಂತೆ ಮಾಡಿದ್ದಾರೆ. ಅಧಿಕಾರಿಗಳ ಬೇಜಾಬ್ದಾರಿ ವರ್ತನೆಗೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ. ಇನ್ನಾದರೂ ರಾಜ್ಯದ ದೊರೆ ಎಚ್ಚೆತ್ತುಸ್ವಕ್ಷೇತ್ರದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವರೆ ಎಂಬುದನ್ನು ಕಾದು ನೋಡಬೇಕಾಗಿದೆ. 

9ಲೈವ್ ನ್ಯೂಸ್ ಶಿಗ್ಗಾವಿ