ಹದಗೆಟ್ಟ ರಸ್ತೆಯನ್ನು ಸರಿಪಡಿವಂತೆ ಪ್ರತಿಭಟನೆ

ಹದಗೆಟ್ಟ ರಸ್ತೆಯನ್ನು ಸರಿಪಡಿವಂತೆ ಪ್ರತಿಭಟನೆ

ಶಿಗ್ಗಾಂವಿ: ತಡಸ ಮುಂಡಗೋಡ 

ಹದಗೆಟ್ಟ ರಸ್ತೆಯನ್ನು ಸರಿಪಡಿವಂತೆ ಪ್ರತಿಭಟನೆ

ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದಲ್ಲಿ ನಡೆಯುತ್ತಿರುವ ತಡಸ ಮುಂಡಗೋಡ ರಸ್ತೆ ಕಾಮಗಾರಿ ವಿಳಂಬದಿಂದ ಸಾವ೯ಜನಿಕರಿಗೆ ತೊಂದರೆ ಯಾಗುತ್ತಿದ್ದು ಕೂಡಲೇ ರಸ್ತೆ ಕಾಮಗಾರಿಯನ್ನು ಪೂಣ೯ ಗೋಲಿಸಬೇಂಕೆದು ಒತ್ತಾಯಿಸಿ ಕನಾ೯ಟಕ  ರಕ್ಷಣಾ ವೇದಿಕೆ( ಪ್ರವೀಣಕುಮಾರ ಶೆಟ್ಟಿ ಬಣ ) ದ ಕಾಯ೯ಕತ೯ರು ತಡಸ ಮುಂಡಗೋಡ ರಸ್ತೆ ತಡೆದು ಬೃಹತ್ ಪ್ರತಿಬಟನೆ ಮಾಡಲಾಯಿತು.

ಪ್ರತಿಭಟನೆ ನೇತ್ರತ್ವ ವಹಿಸಿ ಮಾತನಾಡಿದ ತಾಲೂಕಾ ಅದ್ಯಕ್ಷ ಮಂಜುನಾಥ ಕಮ್ಮಾರ ಈ ರಸ್ತೆ ಕಮಗಾರಿಯು ಆಮೆಗತಿಯಲ್ಲಿ ಸಾಗಿದ್ದು ಇದರಿಂದ ಸಾವ೯ಜನಿಕರಿಗೆ ಹಾಗೂ ವಾಹನ ಸವಾರರಿಗೆ ತುಂಬಾ ತೋಂದರೆಯಾಗುತ್ತಿದ್ದು ಕಳೆದ  ಒಂದು ವಷ೯ದಿಂದ ಕಾಮಗಾರಿ ಪ್ರಾರಂಬೀಸಿರುವ ಗುತ್ತಿಗೆದಾರುರು ನಿಗದಿತ ಸಮಯದಲ್ಲಿ  ಕಾಮಗಾರಿ ಪೂಣ೯ಗೊಳಿಸಲು ವಿಫಲರಾಗಿರುತ್ತಾರೆ.   ಆಧಿಕಾರಿಗಳು ಸಹ ಗುತ್ತಿಗೆದಾರರ ಪರವಾಗಿದ್ದರೇನೊ ಎಂಬ ಸಂಶಯ ಮುಡುತ್ತಿದೆ.

 ಇಲ್ಲಿಯವರೆಗೂ ನಿಮ್ಮ ಮಾತನ್ನು ಕೇಳಿರುವದು ಸಾಕು ಇನ್ನೂ ಮುಂದೆ ತಮ್ಮ ಮಾತನ್ನು ಕೇಳಲು ಆಗದು ಒಂದು ತಿಂಗಳೊಳಗಾಗಿ ಕಾಮಗಾರಿಯನ್ನು ಪೂಣ೯ಗೊಳಿಸಬೇಕು ಇಲ್ಲವಾದರೆ ಒಂದು ತಿಂಗಳ ನಂತರ ಹೋರಾಟವನ್ನು ಉಗ್ರರೂಪಕ್ಕೆ ತೆಗೆದುಕೊಂಡು ಹೊಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಂತರ ಮತಾನಾಡಿದ ತಡಸ ಗ್ರಾಮ ಘಟಕದ ಅಧ್ಯಕ್ಷ ಶಂಕರ ಬಡೀಗೆರ ರಸ್ತೆಯ ಮದ್ಯದಲ್ಲಿ ತಗ್ಗು ಗುಂಡಿ ಬಿದ್ದುದರಿಂದ  ವಾಹನ ಸವಾರುರಗೆ  ಓಡಾಡಲು ತುಂಬಾ ಕಷ್ಟವಾಗಿದೆ. ದಿನನಿತ್ಯ ವ್ಯಾಪರ ವಹಿವಾಟು ನಡೆಸುವ ವ್ಯಾಪಾರಸ್ತರು ದುಳು ಮಣ್ಣುನ್ನು ತಿಂದು ಅನಾರೊಗ್ಯಕ್ಕೆ ಇಡಾಗಿದ್ದಾರೆ. ಕೂಡಲೇ ಕಾಮಗಾರಿಯನ್ನು ಪೂಣ೯ಗೊಳಿಸಿಬೆಕು ಇಲ್ಲವಾದರೆ ಗುತ್ತಿಗೆದಾರರ ಅನುಮತಿಯನ್ನು ರದ್ದು ಪಡಿಸವಸಬೇಕು  ಲೋಕಪಯೋಗಿ ಅಧಿಕಾರಿಗಳನ್ನು ಆಗ್ರಹಿಸಿದರು.

 ಇದಕ್ಕು ಮೊದಲು ಪ್ರತಿಭಟನಾ ನಿರತರು ಜಮಾವಣೆ ಗೊಳ್ಳುತ್ತಿದ ಗ್ರಾಮ ಪಂಚಾಯತಿ ಆವರಣಕ್ಕೆ ಆಗಮೀಸಿದ್ದ ತಹಶಿಲ್ದಾರ  ಶಿವಾನಂದ ರಾಣೆ ಪ್ರತಿಭಟನೆ ಕೈ ಬಿಡಲು ಪ್ರತಿಭಟನಾ ನಿರಂತರ ಮನ ಓಲಿಸಲು ಯತ್ನಿಸಿದ ಪ್ರಯತ್ನ ವಿಫಲವಾಯಿತು.

 ನಂತರ ಗ್ರಾಮ ಪಂಚಾಯತಿಯಿಂದ ಪೊಲಿಸ ಠಾಣೆ ವೃತ್ತದವರೆಗೂ ಮೆರವಣೆಗೆ ಮೂಲಕ ಬಂದು ಸುಮಾರು 2 ತಾಸುವರೆಗೂ ರಸ್ತೆ ತಡೆ ನಡೆಸಲಾಯಿತು. ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಲೋಕಪಯೋಗಿ ಇಲಾಕೆಯ ಸಹಯಕಾ ಕಾಯ೯ ನಿವಾ೯ಹಕ ಅದಿಕಾರಿ ಚಿಕ್ಕಮಠರವರ ಮುಂದೆ ಗುತ್ತಿಗೆದಾರುರನ್ನು ಕರವೇ ಕಾಯ೯ಕತ೯ರು ತರಾಟೆಗೆ ತೆಗೆದುಕೊಂಡರು.

ಗುತ್ತಿಗೆದಾರರು ಮುಂದಿನ ತಿಂಗಳು 23 ನೇ ತಾರಿಕಿನೋಳಗಾಗಿ ಕಾಮಗಾರಿಯನ್ನು ಪೂಣ೯ಗೊಳಿಸುತ್ತವೆ ಎಂದು ಬರವಸೆ ಕೊಟ್ಟ ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಪಿ ಎಸ್ ಐ ಪೋಲಿಸ ಗೌಡ್ರ ನೇತೃತ್ವದಲ್ಲಿ ಸೂಕ್ತ ಬಂದೊಬಸ್ತ ನೀಡಲಾಗಿತ್ತು.