ಛಲ ಇದ್ದರೆ ಎಲ್ಲ ಕ್ಷೇತ್ರದಲ್ಲೂ ಸಾಧಿಸಬಹುದು: ಮುರುಗೇಶ್ ನಿರಾಣಿ 

ಛಲ ಇದ್ದರೆ ಎಲ್ಲ ಕ್ಷೇತ್ರದಲ್ಲೂ ಸಾಧಿಸಬಹುದು: ಮುರುಗೇಶ್ ನಿರಾಣಿ 

ಬೆಂಗಳೂರು, ಆ.25: ಉದ್ಯಮ ಆರಂಭಿಸಲು ನಾವು ಶ್ರೀಮಂತರಾಗಿಯೇ ಇರಬೇಕೆಂದಿಲ್ಲ. ಛಲ ಇದ್ದರೆ ಉದ್ಯಮ ಕ್ಷೇತ್ರದಲ್ಲಿ ಎಲ್ಲ ಬಗೆಯ ಸಾಧನೆ ಮಾಡಲು ಸಾಧ್ಯ. ಈಗ ಉದ್ಯಮಕ್ಕಾಗಿ ಶೇ. 50% ಸಬ್ಸಡಿ ಕೊಡಲಾಗುತ್ತಿದೆ. ಬೆಂಗಳೂರಿನ ಭಿನ್ನ, ದೇಶದಲ್ಲೇ ಕರ್ನಾಟಕ ನಂಬರ್ 1 ಇದೆ. ಮಹಿಳಾ ಉದ್ಯಮದಾರರಿಗೆ ಶೇ.5 ರಷ್ಟು, ಎಸ್ಸಿ, ಎಸ್ಟಿ ಉದ್ಯಮದಾರರಿಗೆ ಶೇ.75 ರಷ್ಟು ಸಹಾಯದನ ನೀಡಲಾಗುತ್ತಿದೆ. ಉಳಿದ ಹಣಕ್ಕೆ ಕೂಡ 10 ಹಂತದಲ್ಲಿ ಹಣ ಸಂದಾಯಕ್ಕೆ ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸಿದೆ. ದೇಶದಲ್ಲೇ ಮೊದಲ ಬಾರಿಗೆ ವುಮೆನ್ ಇಂಡಸ್ಟ್ರಿ ಪಾರ್ಕ್ ಮಾಡಲಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು. 

ಬೆಂಗಳೂರಿನ ಯಸವಂತಪುರದಲ್ಲಿರುವ ಹೋಟೆಲ್ ತಾಜ್ ವಿವಾಂತದಲ್ಲಿ eMERG ಫ್ಲ್ಯಾಗ್‌ಶಿಪ್ ಈವೆಂಟ್‌ನ 7ನೇ ಆವೃತ್ತಿಯ ಭಾಗವಾಗಿ ಆಯೋಜಿಸಿದ್ದ "ಫೋರ್ಜಿಂಗ್ ಲಿಂಕ್‌ಗಳು, ನೆಟ್‌ವರ್ಕ್‌ಗಳು- ರೀಚಿಂಗ್ ಔಟ್" ಉದ್ಯಮ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮಹಿಳಾ ಉದ್ಯಮದಾರರನ್ನು ಬೆಳಕಿಗೆ ತರುವುದು ಬಹಳ ಮುಖ್ಯ. ಅದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕೈಗಾರಿಕಾ ಉದ್ಯಮದ ಸಮಾರಂಭದಲ್ಲಿ ಭಾಗವಹಿಸುವುದು ನನಗೆ ಮಹಿಳೆಯರಿಗೆ ತವರು ಮನೆಗೆ ಹೋದ ಸಂಭ್ರಮದಂತೆ. ಕಾರಣ ನಾನೂ ಒಬ್ಬ ಉದ್ಯಮಿ. ಆದ್ದರಿಂದ ನೀವು ಹಾರ್ಡ್ ವರ್ಕ್ ಮಾಡಿ, ಈಗ ಎಲ್ಲ ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಇದೆಲ್ಲದರ ನಡುವೆ ಎಷ್ಟೇ ಕಷ್ಟ ಆದ್ರೂ ಹಿಂದುರಿಗಿ ನೋಡಬಾರದು. ಆಗ ಮಾತ್ರ ನಾಇವು ಮುಂದೆ ಸಾಗಲು ಸಾಧ್ಯ ಎಂದು ಸಚಿವರಾದ ಮುರುಗೇಶ್ ನಿರಾಣಿ ಹೇಳಿದರು. 

ಕರ್ನಾಟಕ ಅತ್ಯಂತ ಶ್ರೀಮಂತರನ್ನು‌ ಹೊಂದಿದ ರಾಜ್ಯ. ನಾಲ್ವಡಿ ಕೃಷ್ಣರಾಜ ಒಡೆಯರ್ ಇದ್ದ ನಾಡು ನಮ್ಮದು ಇಂದು ಅತಿ‌ಹೆಚ್ಚು ಐಟಿ, ಬಿಟಿ ಎಕ್ಸ್ ಪೋರ್ಟ್ ನಮ್ಮ ರಾಜ್ಯದಿಂದ ಆಗ್ತಿದೆ. ಅತಿ‌ಹೆಚ್ಚು ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡುತ್ತಿರುವುದು ಕೂಡ ಕಟರ್ನಾಟಕ. ಹೀಗಾಗಿ ನಾವು ಈಗ ದೇಶದಲ್ಲೇ ನಂಬರ್ 1 ಸ್ಥಾನದಲ್ಲಿದ್ದೇವೆ ಎಂದು ಸಚಿವ ನಿರಾಣಿ ಹೇಳಿದರು. 

ಮಹಿಳೆಯರು ಮಾದರಿಯಾಗಬೇಕು:
ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಮಾತನಾಡಿ, ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಮುಂದೆ ಬರಬೇಕು. ಜೊತೆಗೆ ಇತರರಿಗೆ ಮಾದರಿಯಾಗಬೇಕು. ಇತ್ತೀಚೆಗೆ ವುಬಂಟು ಅಡಿಯಲ್ಲಿ ಕರ್ನಾಟಕದಲ್ಲಿ ಮಹಿಳಾ ಉದ್ಯಮಿಗಳೆಲ್ಲ ಒಂದಾಗಿದ್ದೇವೆ. ಕೊರೋನಾ ವೇಳೆ ಅನೇಕ ಕಾರ್ಯಕ್ರಮ ಮಾಡಿದ್ದೇವೆ. ಕೊರೋನಾ ಹೇಗೆ ಎದುರಿಸಬೇಕೆಂದು ಆನ್ ಲೈನ್ ಮೂಲಕ ಹೇಳಿ ಕೊಟ್ಟು ಅರಿವು ಮೂಡಿಸಿದ್ದೇವೆ, ಅನೇಕ ತರಬೇತಿ ನೀಡಿದ್ದೇವೆ. ಈಗ ಅಂಗವಿಕಲ ಮಹಿಳೆಯರು, ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲ ಮಹಿಳೆಯರಿಗೂ ಸಹಾಯಧನ ನೀಡಲು ಪಾಲಿಸಿ ಮಾಡಲು ಸರ್ಕಾರಕ್ಕೆ ಮನವಿ‌ ಮಾಡಿದ್ದೇವೆ ಎಂದು ಹೇಳಿದರು. 

ಇದೇ ವೇಳೆ ಮಹಿಳಾ ಸಾಧಕಿಯರನ್ನು ಗುರುತಿಸಿ ವುಮೆನ್ ಎಂಟರ್ ಪ್ರೈನರ್‌ಶಪ್ ಆಫ್ ದಿ ಇಯರ್ 2022 ಪ್ರಶಸ್ತಿಯನ್ನು ಮೀಡಿಯಾ ಕನೆಕ್ಟ್ ನ ದಿವ್ಯಾ ರಂಗೇನಹಳ್ಳಿ ಅವರಿಗೆ, ಪ್ರೊಫೆಷನಲ್ ಆಫ್ ದಿ ಇಯರ್ 2022, ಸೋಷಿಯಲ್ ಎಂಟರ್ ಪ್ರೈನರ್ ಆಫ್ 2022 ಪ್ರಶಸ್ತಿ ಯನ್ನು.... ಅವರಿಗೆ, ಸ್ಟಾರ್ಟ್ ಅಪ್ ಎಂಟರ್ ಪ್ರೈನರ್ ಆಫ್ 2022 ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ಈಮಾರ್ಗ್ ಸಂಸ್ಥಾಪಕ ಅಧ್ಯಕ್ಷೆ ಉಮಾ ರೆಡ್ಡಿ, ಫೌಂಡರ್ ರಾಜಲಕ್ಷ್ಮೀ ಆರ್., ಅಧ್ಯಕ್ಷೆ ಡಾ. ಸುಮಿತಾ ನಾಯಕ್, ಪ್ರತಿಭಾ ನಾಕಿಲ್, ಆಶಾ ವಿ.ಎಂ., ನೀತಾ ಬಜಾಜಿ ಮತ್ತಿತರರು ಉಪಸ್ಥಿತರಿದ್ದರು. 

250 ಮಹಿಳಾ ಉದ್ಯಮಿಗಳು ಭಾಗಿ:
ಕಾರ್ಯಕ್ರಮದಲ್ಲಿ ಮೈಸೂರು, ಶಿವಮೊಗ್ಗ, ಮಣಿಪಾಲ ಮುಂತಾದ ಕಡೆಗಳಿಂದ ಸುಮಾರು 250 ಮಹಿಳಾ ವೃತ್ತಿಪರರು, ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಭಾಗಿಯಾಗಿದ್ದರು. eMERG, ಎಂಜಿನಿಯರಿಂಗ್ ಉತ್ಪಾದಕ ಉದ್ಯಮಿಗಳ ಸಂಪನ್ಮೂಲ ಸಮೂಹವೆನ್ನುವುದು ತಂತ್ರಜ್ಞಾನ, ವ್ಯಾಪಾರ, ವೃತ್ತಿ ಮತ್ತು ಸೇವೆಯಲ್ಲಿ ಪ್ರಾವಿಣ್ಯತೆ ಸಾಧಿಸಿರುವ ಪರಿಣಿತ ಮಹಿಳೆಯರ ಸಂಘಟನೆ. 2006ರಲ್ಲಿ ಸೊಸೈಟೀಸ್ ಆಕ್ಟ್ ಅಡಿಯಲ್ಲಿ ಈ ಸಂಘವನ್ನು ನೋಂದಾಯಿಸಲಾಗಿದ್ದು, eMERG, 300 ಕ್ಕೂ ಹೆಚ್ಚು ನೇರ ಸದಸ್ಯರು ಮತ್ತು 2000 ಕ್ಕೂ ಹೆಚ್ಚು ಪರೋಕ್ಷ ಸದಸ್ಯರನ್ನು ಹೊಂದಿರುವ ಮಹಿಳೆಯರ ಲಾಭರಹಿತ ಸಮೂಹವಾಗಿದ್ದು, ದೇಶಾದ್ಯಂತ, ವಿಭಿನ್ನ ಆಲೋಚನೆ ಹಾಗೂ ವಿಚಾರಧಾರೆಗಳ ವಿನಿಮಯ ಮಾಡಿಕೊಳ್ಳಲು ತನ್ನ ನೆಟ್‌ವರ್ಕ್ ಸದಸ್ಯರೊಂದಿಗೆ ಸಂವಹನ ನಡೆಸಲು ವೇದಿಕೆ ಒದಗಿಸಿಕೊಡುವ ಮೂಲಕ ಉದ್ಯಮಶೀಲ ಮಹಿಳೆಯರ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. 

ವಿವಿಧ ಕ್ಷೇತ್ರಗಳ ಮಹಿಳೆಯರ ಜೊತೆಗೆ ಸಂಪರ್ಕ ಸಾಧಿದುವುದು, ನೆಟ್‌ವರ್ಕ್‌ಗಳನ್ನು ನಿಯಂತ್ರಿಸುವುದು- ತಲುಪುವುದು ಮತ್ತು ತಮ್ಮ  ಅನುಭವವನ್ನು ಹಂಚಿಕೊಳ್ಳುವುದು ಮುಂತಾದ ಚಟುನರ್ನರ್ವಟಿಕೆಗಳಿಗೆ ಇದು ಉತ್ತಮ ವೇದಿಕೆ. ಇಲ್ಲಿ ಎಲ್ಲ ಪ್ರತಿನಿಧಿಗಳು ತಮ್ಮ ನೆಟ್‌ವರ್ಕ್ ಸೃಷ್ಠಿಸಿಕೊಂಡು ವ್ಯಾಪಾರದ ಸಂಪರ್ಕಗಳನ್ನು ವಿಸ್ತರಿಸಿಕೊಳ್ಳುವ ಅವಕಾಶವಿದೆ. ಇದರಿಂದ ಅವರ ಔದ್ಯಮಿಕ ಬೆಳವಣಿಗೆ ಮತ್ತು ಯಶಸ್ಸಿನತ್ತ ಮುಂದಿನ ಹೆಜ್ಜೆ ಇಡಲು ಸಹಾಯವಾಗುತ್ತದೆ. 

ಈ ಉದ್ಯಮ ಸಮಾವೇಶದ ಜೊತೆಗೆ, ವ್ಯಾಪಾರ ಮೇಳವನ್ನೂ ಸಹ ಆಯೋಜಿಸಲಾಗಿತ್ತು. ಇದೇ ವೇಳೆ ಸದಸ್ಯರುಗಳ ಉತ್ಪನ್ನಗಳ ಪ್ರದರ್ಶನ‌ಕೂಡ ನಡೆಯಿತು. ಅಮೃತಸರದಿಂದ ನಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಿಸ್ ನೇಸಿ ಗೋಯೆಲ್ ಅವರು ಪವರ್ ಡ್ರೆಸ್ಸಿಂಗ್ ಕುರಿತು ವಿಶೇಷವಾದ ಕಾರ್ಯಾಗಾರ ನಡೆಸಿದರು. ಈ ಸಮಾರಂಭದಲ್ಲಿ ವಿಶಿಷ್ಠ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು, ತುಮಕೂರಿನ ಪುಷ್ಕರ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ಶ್ರೀಮತಿ ಮೇಘಾ ಎನ್ ಅವರ ವಿಶೇಷ ಪ್ರದರ್ಶನಗಳು ನೆರೆದ ಸಭಿಕರನ್ನು ಆಕರ್ಷಿಸಿತು.